ಬೆಂಗಳೂರು: ಶಿವರಾಜ್ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ʻ45ʼ ಚಿತ್ರದ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ.
ಡಿಸೆಂಬರ್ 25 ಕ್ರಿಸ್ಮಸ್ ದಿನ ಈ ಚಿತ್ರ ತೆರೆಕಾಣಲಿದೆ.ಚಿತ್ರ ಬಿಡುಗಡೆಗೆ ಭಾರಿ ತಯಾರಿ ನಡೆದಿದೆ.
’45’ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷೆಯಲ್ಲಿ ಇದರ ಬಿಡುಗಡೆಯ ಹಕ್ಕುಗಳನ್ನು ದೊಡ್ಡ ದೊಡ್ಡ ಸಂಸ್ಥೆಗಳು ಪಡೆದುಕೊಂಡಿವೆ. ಜೊತೆಗೆ ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳು ಕೂಡ ಮಾರಾಟವಾಗಿವೆ.
ಸದ್ಯ ಕನ್ನಡ ಸಿನಿಮಾಗಳಿಗೆ ಒಟಿಟಿ ಮಾರುಕಟ್ಟೆಯಲ್ಲಿ ಅಂತಹಾ ಬೇಡಿಕೆ ಇಲ್ಲದ ಸಮಯದಲ್ಲಿ ’45’ ಚಿತ್ರ ತೆರೆಗೆ ಬರುವ ಮುನ್ನವೇ ಅದರ ಡಿಜಿಟಲ್ ಹಕ್ಕುಗಳು ಮಾರಾಟ ಮಾಡಲಾಗಿದೆ.
’45’ ಸಿನಿಮಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.
45 ಸಿನಿಮಾವು ಡಿಸೆಂಬರ್ 25ರಂದು ಭಾರತದಲ್ಲಿ ತೆರೆಕಂಡರೆ, ಕೆನಡಾದಲ್ಲಿ ಎರಡು ದಿನ ಮೊದಲೇ,ರಿಲೀಸ್ ಆಗುತ್ತಿರುವುದು ವಿಶೇಷ.
