ವೈರಲ್ ಆದ ಸಿಎಂ ಭರ್ಜರಿ ಡ್ಯಾನ್ಸ್‌

Spread the love

ನವದೆಹಲಿ: ದೆಹಲಿಯ ಮಾಜಿ ಸಿಎಂ‌ ಅರವಿಂದ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಅವರ ಮದುವೆ ಸಂಭವ್ ಜೈನ್ ಅವರೊಂದಿಗೆ ವಿಜೃಂಭಣೆಯಿಂದ ನೆರವೇರಿದೆ.

ಈ ಮದುವೆ ವಿಷಯ ಮಾಮೂಲು.ಆದರೆ ಮದುವೆಯ ಹಿಂದಿನ ದಿನ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಪಂಜಾಬ್​ ಆಪ್ ಸರ್ಕಾರದ ಸಿಎಂ ಭಗವಂತ್ ಮಾನ್ ಭರ್ಜರಿ ನೃತ್ಯ ಮಾಡಿದ್ದು ವಿಶೇಷ. ಜತೆಗೆ ಇದು ಸಕತ್ ಸುದ್ದಿಯಾಗಿಬಿಟ್ಟಿದೆ.

ಭಗವಂತ್ ಮಾನ್ ತಮ್ಮ ಪತ್ನಿಯ ಜೊತೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಗವಂತ್ ಮಾನ್ ಅವರ ಡ್ಯಾನ್ಸ್​ ವಿಡಿಯೋ ವೈರಲ್ ಆಗಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ತಮ್ಮ ಪತ್ನಿ ಗುರುಪ್ರೀತ್ ಕೌರ್ ಅವರೊಂದಿಗೆ ನಾಚಿ ಜೋ ಸಾದೇ ನಾಲ್ ಸಾಂಗ್ ಗೆ ಭಾಂಗ್ರಾ ನೃತ್ಯ ಮಾಡಿದ್ದು ಮದುವೆ ಬಂದವರೆಲ್ಲಾ ಶಹಬ್ಬಾಶ್ ಹೇಳಿದ್ದಾರೆ.