ಚಾಮರಾಜನಗರ: ಚಾಮರಾಜನಗರ ಜಿಲ್ಲೆ, ಹಿರೇಬೇಗೂರು ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸೋಮಹಳ್ಳಿ ಮಠದ ನಿಯೋಜಿತ ಸ್ವಾಮೀಜಿಗಳಾದ ಪೂಜ್ಯ ಶ್ರೀ ಬಸವಯೋಗಿ ಪ್ರಭುಸ್ವಾಮೀಜಿ ಅವರು ಬಸವೇಶ್ವರ ಹಾಗೂ ಗುರುಮಲ್ಲೇಶ್ವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ,ಷಟ್ ಸ್ಥಲ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.
ಅಲ್ಲಮ ಪ್ರಭುಗಳು ಹೇಳಿದ ಶಿವ ಗುರುವೆಂದು ಬಲ್ಲತಾನೆ ಗುರು.ಶಿವ ಲಿಂಗವೆಂದು ಬಲ್ಲತಾನೆ ಗುರು. ಶಿವ ಜಂಗಮವೆಂದು ಬಲ್ಲತಾನೆ ಗುರು. ಶಿವ ಪ್ರಸಾದವೆಂದು ಬಲ್ಲತಾನೆ ಗುರು. ಶಿವ ಆಚಾರವೆಂದು ಬಲ್ಲತಾನೆ ಗುರು ಇಂತೀ ಪಂಚವಿದವೇ ಪಂಚಬ್ರಹ್ಮ
ವೆಂದು ಅರುಹಿದ ಸಂಗನ ಬಸವಣ್ಣ ಎನಗೆಯೂ ಗುರು ನಿನಗೆಯೂ ಗುರು ಜಗವೆಲ್ಲಕ್ಕೂ ಗುರು ಕಾಣ ಗುಹೇಶ್ವರ ಎಂದು ಅಲ್ಲಮಪ್ರಭುಗಳು ಜಗತ್ತಿಗೆ ಬಸವಣ್ಣನೆ ಗುರು ಹೇಳಿದ್ದಾರೆ ಎಂದು ಬಸವ ಯೋಗಿ ಪ್ರಭುಗಳು ಹೇಳಿದರು.
ಊರಿನ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಮೂರ್ತಿ ಮೆರವಣಿಗೆ ನಂದಿಕಂಬ ವಿರಾಗಾಸೆ ವಾದ್ಯಗಳ ಮೂಲಕ ನಡೆಯಿತು.
ಎಲ್ಲೆಡೆ ಬಸವಣ್ಣನವರ ಧ್ವಜ ಮೇರೆಯುತ್ತಿದ್ದವು. ಬೆಳಿಗ್ಗೆ ಮದ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ಗೌಡಿಕೆ ಶಿವಪ್ಪ,ನಂದಿ ಕಂಬ ಗೌಡಿಕೆ ಮಹೇಶ್, ಗುರುಸ್ವಾಮಿ, ಮಹೇಂದ್ರ ಮದು ಚೆರ್ಮೆನ್ ಬಸವ ಬಳಗ ಹಾಗೂ ಬಸವ ಸೇನೆಯ ಯುವಕರು ಗ್ರಾಮದ ಮುಖಂಡರು ಅಕ್ಕ ಪಕ್ಕದ ಊರಿನ ಭಕ್ತರು ಭಾಗವಹಿಸಿದ್ದರು.
