ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ…ಅದೇನಪ್ಪಾ ಅಂದರೆ ಕಳೆದ ತಿಂಗಳು ಬಿಡುಗಡೆಯಾಗಿದ್ದ 5 ಬಹು ನಿರೀಕ್ಷಿತ ಚಿತ್ರಗಳು ಈ ವಾರ ಒಟಿಟಿಗೆ ಬರುತ್ತಿರುವುದು.
ಇದು ನಿಜಾ.ಕಳೆದ ತಿಂಗಳು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ 5 ಬಹು ನಿರೀಕ್ಷಿತ ಚಿತ್ರಗಳು ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ. ಈ ಐದು ಚಿತ್ರಗಳ ಪೈಕಿ 4 ಚಿತ್ರಗಳು ಸೂಪರ್ ಹಿಟ್ ಆದವುಗಳೇನೆ.
ಒಂದು ರಾಜಾ ಸಾಬ್,ಎರಡನೆಯದು ನಾರಿ ನಾರಿ ನಡುಮ ಮುರಾರಿ,ಮೂರನೆಯದು
ಪರಾಶಕ್ತಿ,ನಾಲ್ಕನೆಯದು ಮನ ಶಂಕರ ವರಪ್ರಸಾದ್ ಗಾರು,ಐದನೆಯದು ಅನಗನಗಾ ಒಕ ರಾಜು.
ರಾಜಾ ಸಾಬ್-
ನಟ ಪ್ರಭಾಸ್ ಅಭಿನಯದ ಮಾರುತಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಾಜಾಸಾಬ್ ಚಿತ್ರ ಇದೇ ಫೆಬ್ರವರಿ 6ರಂದು ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ರಾಜಾಸಾಬ್ ಚಿತ್ರ ತೆರೆಕಾಣುತ್ತಿದೆ, ಈ ಚಿತ್ರದಲ್ಲಿ ಮಾಳವಿಕ ಮೋಹನನ್ ಮತ್ತು ನಿಧಿ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ನಾರಿ ನಾರಿ ನಡುಮ ಮುರಾರಿ-
ನಟ ಶರ್ವಾನಂದ್ ಅಭಿನಯದ ತೆಲುಗು ಚಿತ್ರ ನಾರಿ ನಾರಿ ನಡುಮ ಮುರಾರಿ ಕೂಡ ಇವತ್ತೇ ಒಟಿಟಿಗೆ ಲಗ್ಗೆ ಇಟ್ಟಾಗಿದೆ. ಅಮೇಜಾನ್ ಪ್ರೈಮ್ ನಲ್ಲಿ ಚಿತ್ರ ಪ್ರಸಾರವಾಗಲಿದೆ. ನಾರಿ ನಾರಿ ನಡುಮ ಮುರಾರಿ ಚಿತ್ರವನ್ನು ರಾಮ್ ಅಬ್ಬರಾಜು ನಿರ್ದೇಶಿಸಿದ್ದಾರೆ.
ಪರಾಶಕ್ತಿ-
ತಮಿಳು ಖ್ಯಾತನಟ ಶಿವಕಾರ್ತಿಕೇಯ-ಅಭಿನಯದ ಬಹು ನಿರೀಕ್ಷಿತ ಚಿತ್ರ ಪರಾಶಕ್ತಿ ತಮಿಳುನಾಡಿನಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ಸುಧಾ ಕೊಂಗರ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರ ಫೆಬ್ರವರಿ 7ರಂದು ಝೀ 5ನಲ್ಲಿ ಬಿಡುಗಡೆಯಾಗುತ್ತಿದೆ.
ಮನ ಶಂಕರ ವರಪ್ರಸಾದ್ ಗಾರು-
ನಟ ಚಿರಂಜೀವಿ ಅಭಿನಯದ ಸೂಪರ್ ಹಿಟ್ ತೆಲುಗು ಚಿತ್ರ ಮನ ಶಂಕರ ವರಪ್ರಸಾದ್ ಗಾರು ಕೂಡಾ ಫೆಬ್ರವರಿ 11ರಂದು ಝೀ 5ನಲ್ಲಿ ಪ್ರಸಾರವಾಗುತ್ತಿದೆ.
ಅನಗನಗಾ ಒಕ ರಾಜು-
ಜಾತಿರತ್ನಾಲು ಖ್ಯಾತಿಯ ನಟ ನವೀನ್ ಪೋಲಿಶೆಟ್ಟಿ ಅಭಿನಯದ ಹಿಟ್ ಚಿತ್ರ ‘ಅನಗನಗಾ ಒಕ ರಾಜು’ ಕೂಡ ಫೆಬ್ರವರಿ 13ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ.ನಟಿ ಮೀನಾಕ್ಷಿ ಚೌಧರಿ ಚಿತ್ರದ ನಾಯಕಿ.
