ಬಂಟಕಲ್ಲು: ಸ್ವತಃ ರಕ್ತದಾನ ಮಾಡುವ ಮತ್ತು ಇತರರಿಂದ ದಾನ ಮಾಡಿಸುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ರಕ್ತದಾನಿ ಮಂಜು ಅವರು,ಜನುಮದಿನದ ಪ್ರಯುಕ್ತ 39ನೇ ಬಾರಿ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಂಟ ಕಲ್ಲು ನಾಗರಿಕ ಸೇವಾ ಸಮಿತಿ ಲಯನ್ಸ್ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಂಜು ಅವರು ರಕ್ತದಾನ ಮಾಡಿದರು.
ಸುಮಾರು ಐದು ವರ್ಷಗಳಿಂದ ಮೈಸೂರು, ಬೆಂಗಳೂರು, ಉಡುಪಿ ಜಿಲ್ಲೆಯಲ್ಲಿ ಒಂದು ಹೆಜ್ಜೆ ರಕ್ತದಾನಿ ಬಳಗವನ್ನ ಮಾಡಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚಿನ ದಿನದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಬಹಳ ಕಮ್ಮಿ,ರಕ್ತದಾನ ಮಾಡುವುದಕ್ಕೆ ಭಯಪಡುವ ಎಲ್ಲಾ ವಿದ್ಯಾರ್ಥಿಗಳಿಗೆ ಯುವಕರಿಗೆ ಮಾರ್ಗದರ್ಶನವಾಗಿ ನಿಂತು ರಕ್ತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಧೈರ್ಯ ತುಂಬಿ ಪ್ರತಿನಿತ್ಯ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿಸಿಕೊಂಡು ಬರುತ್ತಿದ್ದಾರೆ.
ಇಲ್ಲಿಯವರೆಗೆ 3822 ಜನರಿಗೆ ರಕ್ತದಾನ ಮಾಡಿಸಿದ್ದಾರೆ, ಉಡುಪಿ ಜಿಲ್ಲೆಯಲ್ಲಿ ರಕ್ತದಾನಿ ನೀಮಾ ಲೋಬೊ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಅವರು ಕೂಡ 9 ಬಾರಿ ರಕ್ತದಾನ ಮಾಡಿ ಮತ್ತು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಸೂರ್ಯನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ರಕ್ತದಾನ ಮಾಡುವ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೆ ರಕ್ತದಾನ ಮಾಡಿಕೊಂಡು ಬಂದ ಎಲ್ಲಾ ರಕ್ತದಾನಿಗಳಿಗೆ ರಕ್ತದಾನಿ ಮಂಜು ಅಭಿನಂದನೆ ತಿಳಿಸಿದ್ದಾರೆ.
ರಕ್ತದಾನ ಮಾಡಿದ ರಕ್ತದಾನಿ ಮಂಜು ಅವರನ್ನು ಬಂಡಕಲ್ಲು ನಾಗರಿಕ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
