ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ 2026-27ನೇ ಶೈಕ್ಷಣಿಕ ಸಾಲಿನ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇಂಚರ ಎಂ., ಪ್ರಥಮ ಬಿ.ಎಸ್ಸಿ, ಈಜು ಸ್ಪರ್ಧೆಯಲ್ಲಿ- 50 ಮೀ. ಬಟರ್ಫ್ಲೈ- ತೃತೀಯ ಸ್ಥಾನ
100 ಮೀ. ಫ್ರೀಸ್ಟೈಲ್- ತೃತೀಯ ಸ್ಥಾನ
50 ಮೀ. ಬ್ರೆಸ್ಟ್ಸ್ಟ್ರೋಕ್- ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಐಶ್ವರ್ಯ- ಅಂತಿಮ ಬಿ.ಎಸ್ಸಿ. ಕರಾಟೆ, ಕಥಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಸಾಧನೆಗಾಗಿ ಸಾಧಕ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರಾದ ಲೀಲಾವತಿ ಎನ್.ಕೆ., ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರತಿಮಾ ಕೆ.ಆರ್. ಹಾಗೂ ಅಧೀಕ್ಷಕರಾದ ಬಸವರಾಜು ಬಿ.ಆರ್, ಸಿಬ್ಬಂದಿ ಸಿದ್ದರಾಜು ಅವಿನಾಶ್ ಮತ್ತು ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
