ಮೈಸೂರು: ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ
ನುಡಿ ನಮನ, ಪುಷ್ಪ ನಮನ, ಸೇವಾ ಕಾರ್ಯದೊಂದಿಗೆ 10 ನೇ ಚಾಮರಾಜೇಂದ್ರ ಒಡೆಯರ್ ಜಯಂತಿ ಆಚರಣೆ ಮಾಡಲಾಯಿತು.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಪಟ್ಟದ ಬಸವಲಿಂಗ ಸ್ವಾಮಿಗಳ ಎಜುಕೇಶನ್ (ಟ್ರಸ್ಟ್) ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್,ಡ್ರೈ ಫ್ರೂಟ್ಸ್,ಹಣ್ಣು ಹಂಪಲನ್ನು ವಿತರಿಸುವ ಸೇವಾ ಕಾರ್ಯದೊಂದಿಗೆ ಮೈಸೂರು ಸಂಸ್ಥಾನದ ಅಭಿವೃದ್ಧಿ ಹರಿಕಾರ 23ನೇ ಮಹಾರಾಜರಾದ 10ನೇ ಚಾಮರಾಜೇಂದ್ರ ಒಡೆಯರ್ ಜನ್ಮದಿನಾಚರಣೆಯನ್ನು ಪುಷ್ಪ ನಮನ ಸಲ್ಲಿಸಿ ಸ್ಮರಿಸಿ ಆಚರಿಸಲಾಯಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಅವರು, ಆಧುನಿಕ ಮೈಸೂರು ಸಂಸ್ಥಾನದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಕ್ರಾಂತಿಕಾರಿ ಆಡಳಿತಗಾರ ನಾಡಿನ ಸಾಂಸ್ಕೃತಿಕ ಹಾಗೂ ಆರ್ಥಿಕ ಪ್ರಗತಿಗೆ ದೂರದೃಷ್ಟಿ, ಅಡಿಪಾಯ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಚೇತನ 10ನೇ ಚಾಮರಾಜೇಂದ್ರ ಒಡೆಯರ್. ಅವರ ಸಾಧನೆಗಳು ಇಂದು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದು ತಿಳಿಸಿದರು.
ವಿಶೇಷವಾಗಿ ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗೆ ವಿಶೇಷ ಒತ್ತನ್ನು ನೀಡಿದ್ದರು.ಮೊದಲ ಬಾರಿಗೆ ಸಂಸ್ಕೃತ ಕಾಲೇಜನ್ನು ನಿರ್ಮಾಣ ಮಾಡಿದರು, ಒಳ್ಳೆಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದಸರಾ ದರ್ಬಾರ್ ನಲ್ಲಿ ಗೌರವಿಸಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದರು ಎಂದು ಸ್ಮರಿಸಿದರು.
ಕೃಷಿ ಬ್ಯಾಂಕ್ ಸ್ಥಾಪನೆ,ಮೈಸೂರು ಮೃಗಾಲಯ, ಬೆಂಗಳೂರು ಅರಮನೆ, ಲಾಲ್ಬಾಗ್ ಗಾಜಿನ ಮನೆ ನಿರ್ಮಿಸಿದ್ದರು. ಕಲೆ ಮತ್ತು ಸಾಹಿತ್ಯದ ಪೋಷಕರಾಗಿದ್ದರು ಇಂತಹ ಮಹಾಚೇತನರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಕಾಶ್ ಪ್ರಿಯದರ್ಶನ್ ಹೇಳಿದರು.
ಅಡವಿ ರವಿ ಸ್ವಾಮೀಜಿಗಳು ಮಾತನಾಡಿ,ಹುಟ್ಟುವಾಗ ಉಸಿರು ಇರುತ್ತದೆ ಹೆಸರಿರುವುದಿಲ್ಲ ಉಸಿರು ನಿಂತ ಮೇಲೆ ನಿಮ್ಮ ಹೆಸರು ಈ ಜಗತ್ತಿನಲ್ಲಿ ಅಚ್ಚಳಿಯದೆ ಉಳಿಯುವುದು ಹಾಗೆ ಸಾಧನೆಯನ್ನ ಮಾಡಿ ಎಂದು ತಿಳಿಸಿ ಎಲ್ಲರಿಗೂ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಬಿಜೆಪಿ ಮುಖಂಡರಾದ ಪುರುಷೋತ್ತಮ್, ಧರ್ಮರಾಜ್, ಗಾಯಕ ಯಶವಂತ್ ಕುಮಾರ್, ಸಿಂಚನಗೌಡ, ವಿದ್ಯಾ, ಛಾಯ, ಹಿರಿಯ ಕ್ರೀಡಾಪಟು ಮಹದೇವ್ ,ರಾಜೇಶ್ ಕುಮಾರ್,ಮಹೇಶ, ದತ್ತ ಮತ್ತಿತರರು ಹಾಜರಿದ್ದರು.
