ಮೈಸೂರು: ಪ್ರತಾಪ್ ಸಿಂಹ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ, ಡಾ. ರಾಜ್ ಉದ್ಯಾನವನ ಮುಂಭಾಗ ಸಾರ್ವಜನಿಕರಿಗೆ ವಿವಿಧ ಜಾತಿಯ ಆಯುರ್ವೇದ ಗಿಡಗಳನ್ನು ಉಚಿತ ವಿತರಿಸಿ ನಂತರ ಸಸಿ ನೆಡಲಾಯಿತು.

ನಂತರ, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ 25 ಯುವಕರು
ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಜನುಮದಿನ ಅರ್ಥಪೂರ್ಣವಾಗಿ ನೆರವೇರಿತು.

ಆ ನಂತರ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಗೋಪೂಜೆ ಮಾಡಿ, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಈ ವೇಳೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಪ್ರತಾಪ್ ಸಿಂಹ ಅವರು
ಮೈಸೂರಿನ ಅಭಿವೃದ್ಧಿಯ ಹರಿಕಾರ,ಅವರ ಅವಧಿಯಲ್ಲಿ ಬಹಳಷ್ಟು ಕೆಲಸಗಳಾಗಿವೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಮಾರುತಿ ರಾವ್ ಪವಾರ್, ರಾ.ಪರಮೇಶ ಗೌಡ, ದಿನೇಶ್ ಗೌಡ ಮೈಸೂರು ಮತ್ತು ಚಾಮರಾಜನಗರ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ಸಂದೇಶ್, ಟೆನ್ನಿಸ್ ಗೋಪಿ, ನಜರ್ಬಾದ್ ಅಭಿ, ಮಧು, ಗೋಪಾಲ್, ಎಂ ಎನ್ ಮಂಜುನಾಥ್, ಕಿರಣ್, ಚೆಲುವ, ವಿನೋದ್, ಗುರುರಾಜ್, ರವಿ, ಜಯಸಿಂಹ, ಪ್ರಮೋದ್ ಗೌಡ, ಮಧು ಸೋಮಶೇಖರ್, ಚಂದನ್ ಗೌಡ, ಸಂದೀಪ್ ಚಂದ್ರಶೇಖರ್, ಕುಂಬಾರ ಕೊಪ್ಪಲು ಭೈರಪ್ಪ, ಕೊಳ್ಳೇಗಾಲದ ರಾಜಣ್ಣ, ಕೇಬಲ್ ವೆಂಕಟೇಶ್, ಶ್ರವಣ್ ಮಾಲಿ, ಸುರೇಂದ್ರ, ವೆಂಕಟೇಶ್, ದತ್ತಾತ್ರೇಯ ಸಿಂಧೆ, ಮುಂತಾದವರು ಈ ವೇಳೆ ಹಾಜರಿದ್ದರು.
