ಮೈಸೂರು: ಯುವಕನೊಬ್ಬ ವೃದ್ಧೆಯೊಬ್ಬರನ್ನು ತಳ್ಳಿ ಕೆಳಗೆ ಬೀಳಿಸಿ ಚಿನ್ನದ ಸರ ದೋಚಿದ ಘಟನೆ ಮೈಸೂರಿನ
ಶಾಂತವೇರಿ ಗೋಪಾಲಗೌಡ ನಗರದಲ್ಲಿ ನಡೆದಿದೆ.
ಭಾನುವಾರ ಈ ಸರ ಕಳ್ಳತನ ಪ್ರಕರಣ ನಡೆದಿದ್ದು,ಕೆಳಗೆ ಬಿದ್ದ ಕಾರಣ ಶಿವಮ್ಮ (70) ಎಂಬುವರ ಕತ್ತು ಮತ್ತು ಕಿವಿಗೆ ಗಾಯವಾಗಿದೆ.
ಅಪರಿಚಿತ ಯುವಕ ವೃದ್ಧೆಯನ್ನು ಕೆಳಕ್ಕೆ ತಳ್ಳಿ, ಅವರ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಹಿಳೆಯರೇ ಜಾಗೃತರಾಗಿರಿ
ಬೆಳಗಿನ ವೇಳೆ ಏಕಾಂಗಿಯಾಗಿ ಹೊರಗೆ ಹೋಗುವಾಗ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
