ಪಿರಿಯಾಪಟ್ಟಣ: ಕುಂಬಾರ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ಬಿಡುಗಡೆ ಮಾಡುವಂತೆ ಪಿರಿಯಾಪಟ್ಟಣ ತಾಲೂಕು ಕುಂಬಾರ ಸಂಘ ಒತ್ತಾಯಿಸಿದೆ.
ಪ್ರವಾಸಿ ಮಂದಿರದಲ್ಲಿ ನಡೆದ
ಪಿರಿಯಾಪಟ್ಟಣ ತಾಲೂಕಿನ ಕುಂಬಾರ ಸಂಘದ ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಸೋಮಶೇಖರ್ ಅವರು ಮಾತನಾಡಿ, ತಾಲೂಕಿನಲ್ಲಿ ಸಂಘಟನೇ ಬಲವಾಗಿ ಬೆಳೆದಿದೆ ಆದರೆ ಸರ್ಕಾರಕ್ಕೆ ನಾವು
ಕುಂಬಾರ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕಿದೆ ಎಂದು ಕರೆ ನೀಡಿದರು.
ಮೊದಲು ನಾವೆಲ್ಲ ಒಗ್ಗಟ್ಟಾಗಬೇಕಾಗಿದೆ, ಕುಂಬಾರರಿಗೆ ಎಲ್ಲಾ ಸವಲತ್ತು ಸಿಗಬೇಕು, ಮುಂದಿನ ದಿನಗಳಲ್ಲಿ ನಿಗಮಕ್ಕೆ ಹಣವನ್ನು ಬಿಡುಗಡೆ ಮಾಡುವಂತೆ ರಾಜ್ಯದ ಎಲ್ಲಾ ಕುಂಬಾರರು ಒಟ್ಟಾಗಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವ ಮೂಲಕ ಒತ್ತಾಯಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲೋಕಿನ ಪದಾಧಿಕಾರಿಗಳಾದ ಆರ್ ಮಹೇಶ್ ಸ್ವಾಮಿ ಶೆಟ್ಟಿ, ರಮೇಶ್, ರಾಮಚಂದ್ರ, ಶಿವರಾಜ್, ದೇವಶೆಟ್ಟಿ, ಬಸವರಾಜ್, ರಮೇಶ್, ಸುರೇಶ್, ಮಂಜು, ರವಿ, ಸೋಮಣ್ಣ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.
