ಯಾದಗಿರಿ: ರಾಜ್ಯದ ವಿವಿಧಡೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಯಾದಗಿರಿಯಲ್ಲಿ ಬಾಂಬ್ ತಪಾಸಣಾ ತಂಡ ಪರಿಶೀಲನೆ ನಡೆಸಿತು.
ಜನಸಂದಣಿ ಇರುವ ಕಡೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾ ಕೋರ್ಟ್ ಸೇರಿದಂತೆ ವಿವಿಧೆಡೆ ತಂಡ ಶ್ವಾನದಳದೊಂದಿಗೆ ಅನುಮಾನಾಸ್ಪದ ವಸ್ತುಗಳು,ಪ್ರಯಾಣಿಕರ ಲಗೇಜ್ ಗಳನ್ನು ಪರಿಶೀಲಿಸಿತು.
ಬಾಂಬ್ ತಪಾಸಣಾ ತಂಡವು ನಾರಾಯಣಪುರ ಜಲಾಶಯ ಸೇರಿದಂತೆ ಜಿಲ್ಲೆಯ ವಿವಿಧಡೆ ತಪಾಸಣೆ ಮಾಡಲಿದೆ.
