ಯಾದಗಿರಿ: ನೀರಿನ ಹೊಂಡದಲ್ಲಿ ಬಿದ್ದು ಮೂವರು ಮೃತಪಟ್ಟ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಬಸವನಗರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರಭಾಗದಲ್ಲಿರುವ ನೀರಿನ ಹೊಂಡದಲ್ಲಿ ಬಿದ್ದು ಒಬ್ಬ ಮಹಿಳೆ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಗುಂಡಮ್ಮ(35), ಸುಜಾತ (10), ಶಿವಕಾಂತಮ್ಮ (9)ಮೃತ ದುರ್ದೈವಿಗಳು,
ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನಲೆ ಬಟ್ಟೆ ತೊಳೆಯಲು ಗ್ರಾಮದ ಹೊರಭಾಗದ ನೀರಿನ ಹೊಂಡಕ್ಕೆ ಬಾಲಕಿಯರು ಹೋಗಿದ್ದರು.
ಈ ವೇಳೆ ಕಾಲು ಜಾರಿ ಬಾಲಕಿಯರು ಹೊಂಡಕ್ಕೆ ಬಿದ್ದಿದ್ದಾರೆ.ಅವರನ್ನು ರಕ್ಷಣೆ ಮಾಡಲು ಜೀವದ ಹಂಗು ತೊರೆದು ನೀರಿಗೆ ಮಹಿಳೆ ಹಾರಿದ್ದಾರೆ,ಆದರೆ ಆಕೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.ಇಡೀ ಗ್ರಾಮದ ಜನ ಮಮ್ಮಲ ಮರುಗಿ ಕಣ್ಣೀರು ಹಾಕಿದ್ದಾರೆ.
ಸ್ಥಳೀಯರ ಸಹಾಯದಿಂದ ಮೂವರು ಶವ ಹೊರ ತೆಗೆಯಲಾಗಿದ್ದು,ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ
