ಮೈಸೂರು: ಮೈಸೂರಿನ ಪ್ರಮುಖ ಋಗ್ವೇದ ಅಧ್ಯಾಪಕರಾದ ಎ. ಚಿನ್ಮಯ ದತ್ತ ಘನಪಾಠಿ ಅವರು ಕೇವಲ 32 ನೆ ವಯಸ್ಸಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಋಗ್ವೇದ ಬ್ರಾಹ್ಮಣ ಮತ್ತು ಆರಣ್ಯಕ ಎಂಬ ಅತ್ಯಂತ ವಿಶೇಷ ಹಾಗೂ ಗಂಭೀರ ವಿಷಯದಲ್ಲಿ ಪಿಹೆಚ್.ಡಿ ಪದವಿ ಪಡೆದಿದ್ದಾರೆ
ಚಿನ್ಮಯ ಅವರು ಡಾ. ವಂಶೀ ಕೃಷ್ಣ ಘನಪಾಠಿ ಜೀ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ.
ಇತ್ತೀಚಿಗೆ ಎ. ಚಿನ್ಮಯ ದತ್ತ ಘನಪಾಠಿ ಅವರನ್ನು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸನ್ಮಾನಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದ ವಿದ್ವಾಂಸರಲ್ಲಿ ಇವರೂ ಒಬ್ಬರು.
ಅಪೂರ್ವ ಸ್ನೇಹ ಬಳಗದ ವತಿಯಿಂದ ಗುರುಕುಲ ಗೌರಿಶಂಕರ ನಗರದಲ್ಲಿರುವ ವೇದ ಪಾಠ ಶಾಲೆಯಲ್ಲಿ ವಿದ್ವಾನ್ ಚಿನ್ಮಯ ದತ್ತ ಅವರ ಸಾಧನೆಯನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ವಿದ್ವಾನ್ ಪ್ರಸನ್ನ ಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್,ವಿಕ್ರಂ ಅಯ್ಯಂಗಾರ್, ದೂರ ರಾಜಣ್ಣ, ಜತ್ತಿಪ್ರಸಾದ್, ಸುಚಿಂದ್ರ ತೀರ್ಥ ಹಾಗೂ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳು ಹಾಜರಿದ್ದರು.
