ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನ ಕಾಡಂಚಿನ ಪ್ರದೇಶದಲ್ಲಿ ವನ್ಯಜಜೀವಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಕೆ.ಹೆಚ್.ಸುರೇಶ್ ಕುಮಾರ್ ಅಲಿಯಾಸ್ ಗಿರೀಶ್, ಎಂ.ಬಿ.ಮಧುಸೂದನ್ ಅಲಿಯಾಸ್ ಪ್ರಜ್ವಲ್ ಗೌಡ ಬಂಧಿತರು.
ಬಂಧಿತರಿಂದ ಕಾರು, ಡಬಲ್ ಬ್ಯಾರಲ್ ಹಾಗೂ ಸಿಂಗಲ್ ಬ್ಯಾರಲ್ ಗನ್,14 ಜೀವಂತ ಗುಂಡು, ಗನ್ ಪೌಡರ್, 6 ಉರುಳು ಸೇರಿದಂತೆ ಇನ್ನಿತರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಆರೋಪಿಗಳು ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಸಮೀಪ ಕಾರಿನಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದಾಗ ಅನುಮಾನಗೊಂಡು ಪೊಲೀಸರು ಪರಿಶೀಲಿಸಿಸಿದಾಗ ಬೇಟೆಗೆ ಹೊಂಚು ಹಾಕುತ್ತಿರುವುದು ಗೊತ್ತಾಗಿ ಅವರನ್ನು ಬಂಧಿಸಿದ್ದಾರೆ.
