ಮಧ್ಯಪ್ರದೇಶ: ವ್ಹೀಲಿಂಗ್ ಮಾಡಬೇಡಿ ಅಪಯ ತಂದುಕೊಳ್ಳಬೇಡಿ ಎಂದು ಪೊಲೀಸರು ಬಗೆ,ಬಗೆಯಾಗಿ ತಿಳಿಹೇಳಿದರೂ ಪಡ್ಡೆ ಹುಡುಗರು ವ್ಹೀಲಿಂಗ್ ಮಾಡುವುದು ತಪ್ಪಲಿಲ್ಲ,ಅನಾಹುತಗಳು ನಿಂತಿಲ್ಲ.
ಹೀಗೆ ವ್ಹೀಲಿಂಗ್ ಮಾಡಲು ಹೋದ ಮೂವರು ಸಹೋದರರು ಮುಂದೆ ಸಾಗುತ್ತಿದ್ದ ಕಂಟೈನರ್ ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಹೆದ್ದಾರಿಯಲ್ಲಿ ಬೈಕ್ ಸ್ಟಂಟ್ ವಿಡಿಯೋ ಚಿತ್ರೀಕರಿಸುವಾಗ ತ್ರಿಬಲ್ ರೈಡಿಂಗ್ ಮಾಡುತ್ತಿದ್ದ ಮೂವರು ಸಹೋದರರು ಹೆಲ್ಮೆಟ್ ಧರಿಸದೆ ವೇಗವಾಗಿ ಬಂದಿದ್ಸಾರೆ.
,ರಸ್ತೆ ಬದಿಯಲ್ಲಿ ನಿಂತಿದ್ದ ಟ್ರೈಲರ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಾಯಕಾರಿ ಸ್ಟಂಟ್ ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಿದೆ.
