ಮೈಸೂರು: ಬಿರು ಬಿಸಿಲಿನ ತಾಪದಲ್ಲಿ ಬಳಲುತ್ತಿರುವ ಪಕ್ಷಿ ಪ್ರಾಣಿಗಳ ದಾಹ ನೀಗಿಸುವ ಕಾರ್ಯವನ್ನು ಕೆ ಎಂ ಪಿ ಕೆ ಟ್ರಸ್ಟ್ ನವರು ಮುಂದುವರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಂದು ಟ್ರಸ್ಟ್ ನವರಿಗೆ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಸಾಥ್ ನೀಡಿದ್ದಾರೆ.
ಪ್ರಾಣಿಪಕ್ಷಿಗಳಿಗಾಗಿ ಮರಗಳಲ್ಲಿ ಅಳವಡಿಸಿರುವ ಬೌಲ್ ಗಳಿಗೆ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಅವರೊಂದಿಗೆ ನೀರುಣಿಸಿ ಬಸವರಾಜ್ ಬಸಪ್ಪ ಮಾತನಾಡಿದರು.
ಜೀವಸಂಕುಲದ ಉಳಿವಿಗೆ ನೀರುಣಿಸುವುದು ನಮ್ಮ ಹೊಣೆಗಾರಿಕೆ ಯನ್ನು ಹೆಚ್ಚಿಸಿದಂತೆ ಆಗುತ್ತದೆ ಎಂದು ಅವರು ಹೇಳಿದರು.
ಕೆ ಎಮ್ ಪಿ ಕೆ ಟ್ರಸ್ಟ್ ವತಿಯಿಂದ ಮೂಕ ಸ್ಪಂದನೆ ಹೆಸರಿನಲ್ಲಿ ಪಕ್ಷಿ ಪ್ರಾಣಿಗಳಿಗೆ 15 ದಿನಗಳಿಂದ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ನೀರಿನ ತೊಟ್ಟಿ ಹಾಗೂ ಆಹಾರದ ಬಟ್ಟಲುಗಳನ್ನು ಮರಗಳಲ್ಲಿ ಇಟ್ಟು ಬಟ್ಟಲುಗಳಿಗೆ ನೀರು ಉಣಿಸುವ ಅಭಿಯಾನ ಹಮ್ಮಿಕೊಂಡಿರುವುದು ಅತ್ಯುತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಕೆಎಂಪಿ ಕೆ ಟ್ರಸ್ಟ್ ನವರು ಹಲವಾರು ವರ್ಷಗಳಿಂದ ಈ ಸೇವಾ ಕಾರ್ಯ ಮಾಡುತ್ತಾ ಬಂದಿರುವುದು ನಿಜಕ್ಕೂ ಮೆಚ್ಚುವಂತಹುದು ಎಂದು ತಿಳಿಸಿದರು.
ಕೆಂಡದಂತಹ ಉರಿಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರನ ದಾಹವನ್ನು ತೀರಿಸಿಕೊಳ್ಳಲು ಪ್ರತಿಯೊಬ್ಬರೂ ಜಾಗ ಇರುವ ಕಡೆ ಇಲ್ಲವೇ ಮರದ ಕೊಂಬೆಗೆ ಬಟ್ಟಲುಗಳನ್ನು ಅಥವಾ ತಟ್ಟೆಯನ್ನು ನೇತುಹಾಕಿ ಅದರಲ್ಲಿ ನೀರು ಹಾಗೂ ಆಹಾರವನ್ನು ಇಡಿ ಎಂದು ಬಸವರಾಜ್ ಬದಪ್ಪ ಸಲಹೆ ನೀಡಿದರು.
ಪರಿಸರಕ್ಕೂ ಕೃಷಿಗೂ ಕರಳು ಬಳ್ಳಿಯ ಸಂಬಂಧವಿದೆ ಅದರಂತೆ ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ದೊರಕುವುದು ದುಸ್ತರ, ಹನಿ ನೀರಿಗಾಗಿ ಪಕ್ಷಿಗಳು ನಮ್ಮಂತೆ ಪರದಾಡುತ್ತವೆ, ಬೇಸಿಗೆಯಲ್ಲಿ ಹನಿ ನೀರು ಅಮೃತಕ್ಕೆ ಸಮಾನ ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಎಸ್.ಎನ್ ರಾಜೇಶ್ ನವೀನ್ ಕೆಂಪಿ ಹಾಗೂ ಮತ್ತಿತರರು ನೀರು ಹಾಕಲು ನೆರವಾದರು.
