ಮೈಸೂರು: ಸಾಮಾಜಿಕ ಹೋರಾಟಗಾರ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ಅವರು
ಕಲಾಭೂಮಿ ಯುಗಾದಿ ಪುರಸ್ಕಾರ 2026 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಲಾಭೂಮಿ ಪ್ರತಿಷ್ಠಾನ ವತಿಯಿಂದ ವಿಕ್ರಮ ಅಯ್ಯಂಗಾರ್ ಅವರಿಗೆ
ಕಲಾಭೂಮಿ ಯುಗಾದಿ ಪುರಸ್ಕಾರ 2026 ಪ್ರಶಸ್ತಿ ನೀಡಲಾಗುತ್ತಿದೆ.
ಸಂಘಟನಾ ಕ್ಷೇತ್ರದಲ್ಲಿ ವಿಕ್ರಮ ಅಯ್ಯಂಗಾರ್ ಅವರ ಸೇವೆಯನ್ನು
ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮಾರ್ಚ್ 16 ರಂದು ಬೆಂಗಳೂರು ನಾಗರಬಾವಿ, ಮಲ್ಲತಹಳ್ಳಿ ಕಲಾಗ್ರಾಮದಲ್ಲಿ
ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ
ವಿಕ್ರಮ ಅಯ್ಯಂಗಾರ್ ಅವರಿಗೆ ಕಲಾಭೂಮಿ ಯುಗಾದಿ ಪುರಸ್ಕಾರ 2026 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು
ಕಲಾಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಆಸ್ಕರ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
