ಮೈಸೂರು: ಹುಣಸೂರಿನ ನಾಗರಹೊಳೆ ಬಂಡೀಪುರದಲ್ಲಿ ಸಫಾರಿ ಪುನರಾರಂಭವಾದ ಸಂತೋಷವಿದೆ,ಆದರೆ ಸಫಾರಿ ವೇಳೆ ಮೊಬೈಲ್ ಬಳಕೆ ನಿಷೇಧಿಸಿರುವುದಕ್ಕೆ ಸಫಾರಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಛಾಯಾಗ್ರಾಹಕರು ಬಳಸುವ ದುಬಾರಿ ಕ್ಯಾಮೆರಾಗಳನ್ನು ನಾವು ಬಳಸಲು ಸಾಧ್ಯವಿಲ್ಲ. ನಾವು ವರ್ಷಕ್ಕೆ ಒಮ್ಮೆ ಸಫಾರಿಗೆ ಬರುತ್ತೇವೆ.ಹಾಗಾಗಿ ಮೊಬೈಲ್ ನಲ್ಲಿಯೇ ಸಫಾರಿ ವೇಳೆ ಕಾಣುವ ಪ್ರಕೃತಿ ಸೌಂದರ್ಯ, ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿದು,ನಮ್ಮವರಿಗೆ ಹಂಚಿಕೊಳ್ಳುತ್ತಿದ್ದೆವು.ಈಗ ಆ ಅವಕಾಶ ತಪ್ಪಿದೆ ಎಂದು ಸಫಾರಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪರಿಸರ ಮತ್ತು ಪ್ರಾಣಿ ಪ್ರಿಯರು ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ಈ ಹಿಂದೆಯೇ ಮೊಬೈಲ್ ನಿಷೇಧ ಮಾಡಿರುವುದರಿಂದ ಸಫಾರಿ ವೇಳೆ ಆಗುತ್ತಿದ್ದ ಕಿರಿಕಿರಿ ತಪ್ಪಿದೆ. ವನ್ಯಜೀವಿಗಳನ್ನು ನಿಶಬ್ದದಿಂದ ನೋಡಬೇಕು, ಆದರೆ ಕೆಲವರ ಮೊಬೈಲ್ ರಿಂಗ್ ಆಗುತ್ತಿತ್ತು, ಕೆಲವರು ಮೊಬೈಲ್ ಕ್ಯಾಮೆರಾ ಹಿಡಿದು ಕಿರಿ ಕಿರಿ ಮಾಡುತ್ತಿದ್ದರು, ಹಾಗಾಗಿ ಮೊಬೈಲ್ ನಿಷೇಧ ಸ್ವಾಗತಾರ್ಹ ಎಂದು ಹೇಳಿದ್ದಾರೆ.
