ಉಡುಪಿ: ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ತಪಸ್ಸಿನಂತೆ ಪರಿಶ್ರಮ ಮುಖ್ಯ ಇಂದು ಪ್ರತಿಭಾ ಪ್ರದರ್ಶನಕ್ಕೆ ವಿಫುಲ ಅವಕಾಶಗಳಿದ್ದು. ಸದುಪಯೋಗ ಪಡಿಸಿಕೊಂಡು ಬೆಳೆಯಬೇಕು ಎಂದು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಕನಪುರ ರೋಟರಿ ಭವನದಲ್ಲಿ ನಡೆದ ಸರ್ವಕಲ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ಸಪ್ತಸ್ವರ ಕರೋಕೆ ಗಾಯನ ಸೀಸನ್ 2 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ನಿರ್ದೇಶಕ ಲಯ ಕೋಕಿಲ ಮಾತನಾಡಿ ಸಂಗೀತ ದೈವದತ್ತ ಕಲೆ, ಅದನ್ನ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಸಂಗೀತಕ್ಕೆ ಮಹಾನ್ ಶಕ್ತಿ ಇದೆ ತಪಸ್ಸಿನಂತೆ ಸಾಧನೆ ಮಾಡಬೇಕು ಎಂದು ಹೇಳಿದರು.
ಶಂಕರಪುರ ಚರ್ಚ್ ಧರ್ಮಗುರು ಪ್ರಕಾಶ್ ಅನಿಲ್ ಕ್ಯಾಸ್ತಲಿನೋ, ದೊಡ್ಡಣ್ಣಗುಡ್ಡೆ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಗಳಾದ ರಮಾನಂದ ಗುರೂಜಿ, ಸರ್ಕಾರಿ ಗುಡ್ಡೆ ಜಾಮಿಯಾ ಮಸೀದಿ ಧರ್ಮ ಗುರು ಯೂಸಿಫ್ ವಿಟ್ಲ, ಚಿತ್ರ ನಿರ್ಮಾಪಕ ಕೆ ಸತ್ಯೇಂದ್ರ ಪೈ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿದ್ದರು.
ಜೂಲಿಯಾನ ದಾಂತಿ ಉದ್ಯಾವರ ಅವರಿಗೆ ಕೃಷಿ ರತ್ನ ಪ್ರಶಸ್ತಿ,ಅಲಿಷ ಮಂಡೋನ ಶಂಕರಪುರ ಅವರಿಗೆ ಗಾನ ರತ್ನ ಪ್ರಶಸ್ತಿ,ಬಿ. ಮೋಹಿದ್ದಿನ್ ಉಡುಪಿ ಅವರಿಗೆ ಸಮಾಜ ರತ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಅವರಿಗೆ ಸೇವ ರತ್ನ ಪ್ರಶಸ್ತಿ, ಮೈಸೂರಿನ ಹೆಸರುವಾಸಿಯಾದ ರಕ್ತದಾನಿ ಮಂಜು ವರಿಗೆ ಜೀವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ 60 ಕ್ಕಿಂತ ಹೆಚ್ಚು ಗಾಯಕ ಗಾಯಕಿಯರು ಪಾಲ್ಗೊಂಡಿದ್ದರು.
ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷೇ ರಕ್ತದಾನಿ ನೀಮ ಲೋಬೊ ಅವರು ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಜೋಸೆಫ್ ಲೋಬೊ ಅವರು ನಿರೂಪಣೆ ಮಾಡಿದರು, ಖಜಂಚಿಯಾದ ಜನಿಸಾ ಲೋಬೊ ವಂದನಾರ್ಪಣೆ ಮಾಡಿದರು.
ಪ್ರೇಕ್ಷಕರ ವಿನಂತಿ ಮೇರೆಗೆ ಶಾಸಕ ಸುರೇಶ್ ಗೋರ್ಮೆ ಶೆಟ್ಟಿ ಅವರು ಕರೋಕೆಯಲ್ಲಿ ಗಾಯಕ ಮುಕೇಶ್ ಹಾಡಿರುವ ಒಂದು ಸುಮಧುರ ಗೀತೆ ಹಾಡಿ ರಂಜಿಸಿದರು.
