ಮೈಸೂರು: ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,ಮೈಸೂರಿನ ಅಶೋಕ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಎಸ್ ಜಯಪ್ರಕಾಶ್ ವಹಿಸಿದ್ದರು.
ಕಾವೇರಿ ನೀರು ನಿರ್ವಹಣ ಮಂಡಳಿಗೆ ಧಿಕ್ಕಾರ, ರಕ್ತಕೊಟ್ಟೇವು ನೀರು ಬಿಡೆವು, ಪದೇ ಪದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಮಂಡಳಿಗೆ ಧಿಕ್ಕಾರ ಎಂದು ಪ್ರತಿಭಟನಾ ನಿರತರು ಘೋಷಣೆಗಳನ್ನು ಕೂಗಿದರು
ತೇಜೇಶ್ ಲೋಕೇಶ್ ಗೌಡ, ಮೆಲ್ಲಹಳ್ಳಿ ಮಹದೇವಸ್ವಾಮಿ, ಮೂಗೂರು ನಂಜುಂಡಸ್ವಾಮಿ, ಸುರೇಶ್ ಗೌಡ, ಕೆ.ಬಿ ಲಿಂಗರಾಜು, ಸೋಮೇಗೌಡ, ಸಿಂದುವಳ್ಳಿ ಶಿವಕುಮಾರ್, ಸಂತೋಷ್, ಪ್ರಭುಶಂಕರ, ಹನುಮಂತಯ್ಯ, ಬಾಲಿ, ಶ್ರೀನಿವಾಸ, ಕೃಷ್ಣಪ್ಪ, ಮತ್ತಿತರ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
