ಮೈಸೂರು: ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂನಲ್ಲಿರುವ
ತಗಡೂರು ರಾಮಚಂದ್ರರಾವ್
ಉದ್ಯಾನವನದಲ್ಲಿ ಗಿಡ ನೆಟ್ಟು ನೀರು ಹಾಕಿ,
ತಿಲಕ್ ಹಾಗೂ ಆಜಾದ್ ಅವರ ಜನುಮ ದಿನ ಆಚರಿಸಲಾಯಿತು.
ಸ್ವರಾಜ್ಯದ ಕನಸನ್ನು ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಬಿತ್ತಿ, ಅಖಂಡ ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸಿದ ಕ್ರಾಂತಿವೀರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಹಾಗೂ ಬ್ರಿಟಿಷರ ಗುಲಾಮಗಿರಿಗೆ ಎಂದೂ ತಲೆಬಾಗದೆ, ಅಂತಿಮ ಉಸಿರಿನವರೆಗೂ ‘ಆಜಾದ್’ ಆಗಿಯೇ ಉಳಿದ ವೀರ ಸೇನಾನಿ ಚಂದ್ರಶೇಖರ ಆಜಾದ್ ಎಂದು ಸ್ಮರಿಸಿ,ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮ್ ಪ್ರಸಾದ್,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಪಡವಾರಹಳ್ಳಿ ರಾಮಕೃಷ್ಣ, ಜಗದೀಶ್, ಅಪೂರ್ವ ಸುರೇಶ್, ದೂರ ರಾಜಣ್ಣ, ಸಂದೀಪ್, ಬಸವರಾಜ್, ನಾಗೇಶ್ ಯಾದವ್, ದಯಾನಂದ ನಾಯಕ್, ಸುಚೇಂದ್ರ ,ಮಿರ್ಲೆ ಪನೀಷ, ಮಹದೇವಸ್ವಾಮಿ, ಮತ್ತಿತರರು ಹಾಜರಿದ್ದರು
