ಮೈಸೂರು: ದಸರಾ-2026 ರ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅ.11 ರಿಂದ 25 ರವರೆಗೆ ಒಟ್ಟು 15 ದಿನ ಆಯೋಜಿಸಲಾಗಿದ್ದ ಭವ್ಯ ಆಹಾರ ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮೇಳದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ.
ರಾಜ್ಯದ ವಿವಿಧ ಭಾಗಗಳ ವಿಶೇಷ ತಿನಿಸುಗಳನ್ನು ಸವಿಯಲು ಪ್ರತಿನಿತ್ಯ ಸುಮಾರು 70 ರಿಂದ 80 ಸಾವಿರ ಜನರು ಆಹಾರ ಮೇಳಕ್ಕೆ ಆಗಮಿಸುತ್ತಿದ್ದರಿಂದ ಪ್ರತಿದಿನ ಅಪಾರ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು,ಹಾಗಾಗಿ
ತ್ಯಾಜ್ಯ ನಿರ್ವಹಣೆಗೆ ಮೈಸೂರು ನಗರ ಪಾಲಿಕೆ ವಿಶೇಷ ಕ್ರಮ ಕೈಗೊಂಡಿತು.
ಆಹಾರ ಮೇಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ತ್ಯಾಜ್ಯ ಎಂದು ವಿಂಗಡಿಸಿ, ಅದೇ ದಿನ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಯಿತು.
ಇದಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ 11 ಆಟೋ ಟಿಪ್ಪರ್ಗಳು,
4 ಕಾಂಪ್ಯಾಕ್ಟರ್ಗಳು,
40 ಜನರ ಮಾನವ ಸಂಪನ್ಮೂಲವನ್ನು ನಿತ್ಯ ಮೂರು ಪಾಳಿಗಳಲ್ಲಿ ನಿಯೋಜಿಸಿ ಸ್ವಚ್ಛತೆಯನ್ನು ನಿರ್ವಹಿಸಲಾಯಿತು.
15 ದಿನಗಳಲ್ಲಿ ಹಸಿ ಕಸ: 1,81,830 ಕೆಜಿ
ಒಣ ಕಸ: 27,895 ಕೆಜಿ
ಖಾಲಿ ನೀರಿನ ಬಾಟಲ್ಗಳು: 6,325 ಕೆಜಿ ಸೇರಿ ಒಟ್ಟು216.05 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ.
ದಸರಾ ಆಹಾರ ಮೇಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲ್ಲಿಯೂ ಕಸ ಬೀಳದಂತೆ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
