ಮೈಸೂರು: ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಈಶ ಗ್ರಾಮೋತ್ಸವ 2026 ರ ಅಂಗವಾಗಿ, ಈಶ ಔಟ್ರೀಚ್ ವತಿಯಿಂದ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ಥ್ರೋಬಾಲ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ.
14 ವರ್ಷ ಮೇಲ್ಪಟ್ಟ ಮಹಿಳೆಯರು ತರಬೇತಿ ಪಡೆದು ಗ್ರಾಮೋತ್ಸವಕ್ಕೆ ತಂಡ ರಚಿಸಬಹುದಾಗಿದೆ. ವಿಜೇತ ತಂಡಗಳಿಗೆ 5 ಲಕ್ಷದವರೆಗೆ ಬಹುಮಾನ ಇರಲಿದೆ.
ಶಿಬಿರಗಳು ಪ್ರತಿದಿನ ಸಂಜೆ 4 ರಿಂದ 6 ಗಂಟೆವರೆಗೆ ನಡೆಯಲಿದ್ದು, ನೋಂದಣಿ ಉಚಿತ. ಆನ್ಲೈನ್ ನೋಂದಣಿಗೆ isha.co/grm-camp ಸಂಪರ್ಕಿಸಬಹುದು.
ಜಿಲ್ಲಾವಾರು ವಿವರ:
ಮೈಸೂರು: ಮೇ 20-24, SMS ವಿದ್ಯಾಸಂಸ್ಥೆ, ಬೆಟ್ಟದಪುರ. ಮೊ: 9986629711.
ದ.ಕನ್ನಡ: ಮೇ 20-24, ಅಲ್ವಾಸ್ ಪಿಯು ಕಾಲೇಜು ಮೈದಾನ, ಮೂಡಬಿದ್ರೆ. ಮೊ: 945717428.
ವಿಜಯಪುರ: ಮೇ 20-24, ತಾ.ಪಂ ಕಚೇರಿ ಸಮೀಪ, ಬಬಲೇಶ್ವರ. ಮೊ: 7483650257.
ಶಿವಮೊಗ್ಗ: ಮೇ 27-31, ಸ.ಹಿ.ಪ್ರಾ.ಶಾಲೆ, ಹರಗೊಪ್ಪ. ಮೊ: 7676004899.ಸಂಪರ್ಕಿಸಬಹುದು.
