ನಾರ್ವೆ (ಓಸ್ಲೋ): ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾರ್ವೆಗೆ ಬಂದಿಳಿದಿದ್ದಾರೆ.
ಸ್ವೀಡನ್ನಿಂದ ಸೋಮವಾರ ನಾರ್ವೆ ರಾಜಧಾನಿ ಓಸ್ಲೋಗೆ ಮೋದಿ ಬಂದಿಳಿದರು.ಅವರನ್ನು ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಧಾನಿ ಮೋದಿ,ವಿಮಾನ ನಿಲ್ದಾಣದಲ್ಲಿ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾರ್ವೇ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತ-ನಾರ್ವೆ ಸ್ನೇಹಕ್ಕೆ ಇದು ಚೈತನ್ಯ ತುಂಬುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಾಲ್ಕು ದಶಕಗಳ ನಂತರ ನಾರ್ವೆಗೆ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ ಎನಿಸಿದ್ದಾರೆ.
ಭೇಟಿ ವೇಳೆ ಪ್ರಧಾನಿ ಮೋದಿ ಅವರು ನಾರ್ವೆಯ ರಾಜ ಐದನೇ ಹೆರಾಲ್ಡ್ ಮತ್ತು ರಾಣಿ ಸೋಂಜಾ ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ, ಇಲ್ಲಿ ನಡೆಯುವ ಭಾರತ-ನಾರ್ಡಿಕ್ನ 3ನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಓಸ್ಲೋದಲ್ಲಿ ಮೇ 19 ರಂದು ನಡೆಯಲಿರುವ 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
