ಮೈಸೂರು: ಮೈಸೂರಿನ ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ಕ್ವೀನ್ಸ್ ವತಿಯಿಂದ ಮೇಟಗಳ್ಳಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಶ್ರೀರಂಗರಾವ್ ಅವರ ಸ್ಮಾರಕದಲ್ಲಿರುವ ಅಂಧ ಹಾಗೂ ಮಾತು ಬಾರದ ಮಕ್ಕಳಿಗೆ 71 ಟಾಕಿಂಗ್ ವಾಚ್ಗಳನ್ನು ವಿತರಿಸಲಾಯಿತು.
ವಿಶೇಷ ಮಕ್ಕಳಿಗೆ ಸಮಯದ ಅರಿವು ಮೂಡಿಸುವುದರ ಜೊತೆಗೆ ಅವರ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬನೆಗೆ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ಎಸ್. ಮತೀದೇವಕುಮಾರ್, ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಎಂ.ಎನ್. ಜಯಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಲಯನ್ ಟಿ.ಹೆಚ್. ವೆಂಕಟೇಶ್, ಲಯನ್ ಎ.ವಿ. ಮತ್ಯುಂಜಯ್, ಕ್ವೀನ್ಸ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎಂ.ಎನ್. ಶಶಿಕಲಾ ಮೋಹನ್, ಕಾರ್ಯದರ್ಶಿ ಲಯನ್ ಆಶಾ ದರ್ಶನ್, ಖಜಾಂಚಿ ಲಯನ್ ಸುಗಣ ಹೊನ್ನರಾಜು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ಯಾಲೇಸ್ ಸಿಟಿ ಸದಸ್ಯರು, ಶ್ರೀಗಂಧ ಸಂಸ್ಥೆಯ ಸದಸ್ಯರು ಹಾಗೂ ಲಯನ್ಸ್ ಗ್ರೀನ್ಸ್ ಸಿಟಿ ಸಂಸ್ಥೆಯ ಸದಸ್ಯರು ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ವಿಶೇಷ ಮಕ್ಕಳ ಅಗತ್ಯಗಳನ್ನು ಗುರುತಿಸಿ ಅವರಿಗೆ ಉಪಯುಕ್ತ ಸಾಧನಗಳನ್ನು ಒದಗಿಸುವ ಮೂಲಕ ಸಮಾಜಮುಖಿ ಸೇವಾ ಚಟುವಟಿಕೆಗೆ ಲಯನ್ಸ್ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಮಕ್ಕಳ ಮುಖದಲ್ಲಿ ಮೂಡಿದ ಸಂತಸವು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು ಎಂದು ಲಯನ್ ಜಿಲ್ಲೆ 317 ಜಿ ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ ಆರ್ ದಿನೇಶ್ ಮಾಹಿತಿ ನೀಡಿದ್ದಾರೆ.ಅ
