ಯಳಂದೂರು: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಇಪ್ಪೋ ಕ್ಯಾಂಪ್ ಶಾಲೆಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಚಿದಂಬರ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಎಲ್ ಕೆ ಜಿ, ಯು ಕೆ ಜಿ ತರಗತಿ ಮಕ್ಕಳು ಬಾಲಕೃಷ್ಣ ಮತ್ತು ಬಾಲರಾಧೆಯರ ವೇಷ ಧರಿಸಿ ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಸೌಮ್ಯ , ಪುಟಾಣಿಗಳು ಸೇರಿದಂತೆ ಪೋಷಕರು ಮತ್ತಿತರರು ಹಾಜರಿದ್ದರು.
