ಮೈಸೂರು: ಕರೆಂಟ್ ಶಾಕ್ ನಿಂದ ಎರಡು ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ
ಸುಶೀಲ ನಂಜಪ್ಪ ಅವರು ಮಾದರಿಯಾಗಿದ್ದಾರೆ.
ಸುಶೀಲ ನಂಜಪ್ಪ ಅವರು ಮೈಸೂರು ಮಹಿಳಾ ಸಹಕಾರ ಬ್ಯಾಂಕ್ ನ ಅಧ್ಯಕ್ಷರು ಹಾಗೂ ನಿರ್ದೇಶಕರೂ ಆಗಿದ್ದಾರೆ.
ಕರೆಂಟ್ ಶಾಕ್ ನಿಂದ ಎರಡು ಕೈಗಳನ್ನು ಕಳೆದುಕೊಂಡ ಶಾರದಾ ದೇವಿ ನಗರದ ಶಿವನಂಜು ಅವರಿಗೆ ಎರಡು ಕೈಗಳನ್ನು ಜೋಡಿಸಲು ಹಣದ ಅವಶ್ಯಕತೆ ಇದ್ದುದರಿಂದ ಅವರು ಸಹಾಯಕ್ಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ಈ ಬಗ್ಗೆ ತಿಳಿದ ಸುಶೀಲ ನಂಜಪ್ಪ ಅವರು ಶಿವನಂಜು ಅವರನ್ನು ಮನೆಗೆ ಕರೆಸಿ ಸಹಾಯಧನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಧನಸಹಾಯ ಮಾಡಿದ ವೇಳೆ ಸಮಾಜ ಸೇವಕ ಪ್ರದೀಪ್ ಕೃಷ್ಣೇಗೌಡ ಹಾಗೂ ಮಂಜು ಹಾಜರಿದ್ದರು.
