ಮೈಸೂರು: ಮೈಸೂರಿನ ಕೃಷ್ಣರಾಜ ಮಂಡಲದಲ್ಲಿ ಬಿ ಎಲ್ ಎ -2 ಕಾರ್ಯಗಾರವನ್ನು ಶ್ಯಾಮಲಾ ಅವರು ಎಲ್ ಇ ಡಿ ಪರದೆಯಲ್ಲಿ ಪಿ ಪಿ ಟಿ ಮೂಲಕ ಕಾರ್ಯಕರ್ತರಿಗೆ ತಿಳಿಸಿ ಕೊಟ್ಟರು.
ಈ ವೇಳೆ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರು ಮಾತನಾಡಿ, ಬಿ ಎಲ್ ಎ – 2 ಅವರದು ಪ್ರಮುಖ ಜವಾಬ್ದಾರಿಯಾಗಿದೆ, 260ಕ್ಕೂ ಹೆಚ್ಚು ಬಿ ಎಲ್ ಎ -2 ಗಳನ್ನು ಕೃಷ್ಣರಾಜ ಮಂಡಲದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಬಿ ಎಲ್ ಎ -2 ಗಳು ತಮ್ಮ ಜವಾಬ್ದಾರಿಯನ್ನು ಕಾರ್ಯಕರ್ತರೂ ಪದಾಧಿಕಾರಿಗಳ ಜೊತೆಗೂಡಿ ಯಶಸ್ವಿಯಾಗಿ ಮಾಡಬೇಕು, ಮಾಡಿದಾಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ತುಂಬಾ ಸಹಾಯವಾಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಗರ ಅಧ್ಯಕ್ಷರಾದ ಎಲ್ ನಾಗೇಂದ್ರ, ಮಂಡಲ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ರಾಜ್ಯ ಪ್ರಕೋಷ್ಟ ಸಂಚಾಲಕ ಫಣೀಶ್ ರವರು, ವಿಭಾಗ ಪ್ರಭಾರಿ ಸ್ವಾಮಿ ಮರಳಪುರ, ಸಹ ಪ್ರಭಾರಿ ಇ ಸಿ ನಿಂಗರಾಜ್ ಗೌಡ, ಮಾಜಿ ಮಹಾ ಪೌರರಾದ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್, ಬಿ ಎಲ್ ಎ ಗೋಕುಲ್ ಗೋವರ್ಧನ್, ನಗರ ಉಪಾಧ್ಯಕ್ಷ ರಮೇಶ್ ಹಾಗೂ ವಿಶ್ವೇಶ್ವರಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ಜೈ ಶಂಕರ್, ನಗರ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ ಎಂ ಮತ್ತಿತರರು ಪಾಲ್ಗೊಂಡಿದ್ದರು.
