ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಪಿ ಎಂ ಶ್ರೀ ಆದರ್ಶ ಸರ್ಕಾರಿ ಶಾಲೆಗೆ ಮಂಗಳವಾರ ಸಂಸದ ಸುನೀಲ್ ಬೋಸ್ ಅವರು ಭೇಟಿ ನೀಡಿದರು.
ಶಾಲೆಗೆ ಆಗಮಿಸಿದ ಸಂಸದರಿಗೆ ಶಾಲೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ ನೂತನವಾಗಿ ಆಯ್ಕೆಯಾಗಿರುವ ಎಸ್. ಡಿ. ಎಂ.ಸಿ ಅಧ್ಯಕ್ಷ ಎಸ್ ಪ್ರಕಾಶ್ ಹಾಗೂ ಮುಖ್ಯ ಶಿಕ್ಷಕಿ ಆರ್. ಪ್ರಿಯದರ್ಶಿನಿ ಅವರು ಶಾಲೆಯ ಅಭಿವೃದ್ಧಿಗೆ ಸೈಕಲ್ ಸ್ಟಾಂಡ್, ಬಾಸ್ಕೆಟ್ ಬಾಲ್ ಕೋರ್ಟ್ ನ್ನು ಸಂಸದರ ಅನುದಾನದಲ್ಲಿ ಅಭಿವೃದ್ಧಿ ಪಡಿಸಿ ಕೊಡುವಂತೆ ಸಂಸದರಲ್ಲಿ ಮನವಿ ಮಾಡಿದರು. ಹಾಗೂ ಶಾಲೆಯ ಆಸ್ತಿ ಹಸ್ತಾಂತರ ಕುರಿತು ವಿಷಯ ತಿಳಿಸಿದರು.
ಇದೇ ವೇಳೆ ಅಂತರಾಷ್ಟ್ರೀಯ ಮಿಕ್ಸರ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ನೇಪಾಳಕ್ಕೆ ತೆರಳುತ್ತಿರುವ ಆದರ್ಶ ಶಾಲೆಯ ವಿದ್ಯಾರ್ಥಿನಿ ಜೀವಿತಳ ಪ್ರವಾಸದ ಖರ್ಚು ವೆಚ್ಚಗಳಿಗೆ ಸಹಾಯಧನ ಕೋರಲಾಯಿತು.
ಈ ಸಂಧರ್ಭದಲ್ಲಿ ಎಸ್ ಡಿ ಎಮ್ ಸಿ ಸದಸ್ಯರುಗಳಾದ ಲಿಂಗರಾಜು, ಸೋಮಣ್ಣ, ಅಂತೋನಿ ರಾಜ್, ಪರಶಿವ, ಯೋಗೀಶ್,ಸುರೇಶ್,ಮಾಜಿ ನಗರ ಸಭಾ ಅಧ್ಯಕ್ಷರಾದ ರೇಖಾ ರಮೇಶ್,ಎಸ್. ರಮೇಶ್, ಟಿ.ಪಿ ಬಸವಣ್ಣ, ಮುಡಿಗುಂಡ ಶಾಂತರಾಜ್, ಮೂರ್ತಿ,ಶಿವು (ಕಬಾಲಿ),ಪುಟ್ಟಮಾದಯ್ಯ ಶರತ್,ಕಿಜರ್, ಹಾಗೂ ಸಂಸದರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
