ಮೈಸೂರು: ಡಿ.ಕೆ. ಶಿವಕುಮಾರ್ ಅವರು ಇದೇ ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲೆಂದು ಪ್ರಾರ್ಥಿಸಿ,ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಮೈಸೂರು ಜಿಲ್ಲಾ ಘಟಕದಿಂದ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವೇದಘೋಷ, ಮಂತ್ರಪಠಣದೊಂದಿಗೆ ವಿಶೇಷ ಅಭಿಷೇಕ, ಗಣಹೋಮ ಹಾಗೂ ಅರ್ಚನೆ ನೆರವೇರಿಸಿ ನಂತರ 101 ತೆಂಗಿನಕಾಯಿಗಳನ್ನು ಈಡುಗಾಯಿ ಹೊಡೆಯಲಾಯಿತು.
ಡಿಕೆಶಿ ಅವರಿಗೆ ಯಾವುದೇ ವಿಘ್ನ-ವಿಘಾತಗಳು ಬಾರದೆ, ಸುಗಮವಾಗಿ ಮುಖ್ಯಮಂತ್ರಿ ಪದವಿ ಒಲಿಯಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು “ಡಿಕೆಶಿಗೆ ಜೈ” ಎಂದು ಜಯಘೋಷ ಕೂಗಿದರು.
ಪೂಜೆಯ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಯಿತು.
