ಹೆಚ್.ಡಿ.ಕೋಟೆ: ಬಸವ ಭಾರತ ಪ್ರತಿಷ್ಟನಾ ಮೈಸೂರು ಹಾಗೂ ಬಸವ ಪರ ಸಂಘಟನೆಗಳ ನೇತೃತ್ವದಲ್ಲಿ ಮಾದಹಳ್ಳಿ ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರಪ್ಪ ಅವರ ಮಹಾಮನೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಲ್ಯಾಣ ಕ್ರಾಂತಿ ಶರಣರ ವಿಜಯೋತ್ಸವ, ಶರಣ ಗ್ರಂಥಾಲಯ ಉದ್ಘಾಟನೆ ಮತ್ತು ಬಸವ ಸೇವಾರತ್ನ ಪ್ರಶಸ್ತಿ ಸಮಾರಂಭ ನಡೆಯಿತು.
ನಂತರ ಫ. ಗು. ಹಳಕಟ್ಟಿಯವರ ಶಿವಾನುಭಾವ ಪತ್ರಿಕೆಯ ಶತಮನೋತ್ಸವದ ಚಿಂತನೆ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸೋಮಹಳ್ಳಿ ಮಠದ ನಿಯೋಜಿತ ಸ್ವಾಮೀಜಿಗಳಾದ ಬಸವಯೋಗಿಪ್ರಭು ಸ್ವಾಮೀಜಿಯವರು, ಹೊರಗಡೆ ಶತ್ರುಗಿಂತ ಒಳಗಡೆಯ ಶತ್ರುಗಳು ಬಹಳ ಅಪಾಯ ಎಂದು ಹೇಳಿದರು.
ನಮ್ಮೊಳಗಿನ ಕೋಪ ಅಹಂಕಾರ ದುರಾಸೆ ಮತ್ತು ಅರಿಷ್ಡ್ವರ್ಗಗಳನ್ನು ಗೆದ್ದು ಸಮಾಧಾನದ ಬದುಕನ್ನು ಬದುಕಿದವನೇ ಶರಣನಾಗಲು ಸಾಧ್ಯ ಎಂದು ತಿಳಿಸಿದರು.
ಶರಣ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಶರಣರು ಕಟ್ಟಿದ ಧರ್ಮ ಸಮಾನತೆಯ ಧರ್ಮ ಮಾದರ ಚೆನ್ನಯ್ಯ ಹರಳಯ್ಯನಂತ ಮಹಾನುಭಾವರನ್ನು ಸೇರಿಸಿ ಕಟ್ಟಿದ ಧರ್ಮ. ನಮ್ಮ ತಂದೆ ತಾಯಿಗಳು ಕೂಡ ದೀಕ್ಷೆ ಪಡೆದು ಲಿಂಗ ಪೂಜೆ ಮಾಡಿಕೊಳ್ಳುತಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಸವ ಸಮಿತಿಯ ಅಧ್ಯಕ್ಷರಾದ
ಅರವಿಂದ ಜತ್ತಿ ಮಾತನಾಡಿ ಬಸವಯೋಗ ಸಾಧನೆಯಿಂದ ಮಾನವನ ಅರಿವು ವಿಕಾಸವಾಗಿ ಶರಣನಾಗಬಹುದು. ಪ್ರತಿಯೊಬ್ಬರು ಇಷ್ಟಲಿಂಗ ಧರಿಸಬೇಕು ಎಂದು ಸಲಹೆ ನೀಡಿದರು.
ಸ್ವಚ್ಛ ಭಾರತ ನಿರ್ಮಾಣಮಾಡಬೇಕು ಎಂದರೆ ಬಸವಾದಿ ಶರಣರ ವಿಚಾರ ಚಿಂತನೆ ಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ತಿಳಿಸಿದರು.
ಮೈಸೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ದೇಚಿ ದೇವರಾಜು ಚಿಕ್ಕಹಳ್ಳಿ ಮಾತನಾಡಿ ಫ. ಗು. ಹಳಕಟ್ಟಿಯವರು ಮನೆ ಮಠಗಳಲ್ಲಿದ್ದ ವಚನಗಳನ್ನು ಸಂಗ್ರಹಿಸಿ 1921 ರಲ್ಲಿ ಮಂಗಳೂರ್ ಬಾಶಲ್ ಮಿಷನ್ ಪ್ರೆಸ್ ಗೆ ಪ್ರಿಂಟ್ ಮಾಡಲು ಕಳುಹಿಸಿಕೊಡುತ್ತಾರೆ. ಬೈಬಲ್ಲನ್ನು ಮೀರಿಸುವ ವಿಚಾರ ವಚನ ಸಾಹಿತ್ಯದಲ್ಲಿ ಕಂಡುಬಂದ ಕಾರಣ ವಚನಗಳನ್ನು ಪ್ರಿಂಟ್ ಮಾಡದೇ ವಾಪಾಸ್ ಕಳುಹಿ ಸುತ್ತಾರೆ. ನಂತರ ಫ. ಗು. ಹಳಕಟ್ಟಿ ತಮ್ಮ ಮನೆ ಮಾರಿ ಹಿತಚಿಂತಕ ಪ್ರೆಸ್ ಆರಂಭಿಸಿ 1926 ರಲ್ಲಿ ಶಿವನುಭಾವ ತ್ರ್ಯಮಾಷಿಕ ಪತ್ರಿಕೆ ಆರಂಭಿಸಿ ನಂತರ ಧ್ವಯ್ ಮಾಸಿಕ ನಂತರ ಮಾಸಿಕ ಪತ್ರಿಕೆ ತೆಗೆದು ಶರಣ ವಚನಗಳು ಶರಣ ಚರಿತ್ರೆ ಎಲ್ಲೆಡೆ ಪಸರಿಸಲು ಶ್ರಮಿಸಿದರು ಎಂದು ಶಿವನುಭಾವ ಪತ್ರಿಕೆ ನಡೆದು ಬಂದ ಹಾದಿಯನ್ನು ವಿವರಿಸಿದರು.
ಹಲ್ಲರೆ ಶಿವಬುದ್ಧಿ ಶರಣ ಕ್ರಾಂತಿ ಬಗ್ಗೆ ಮಾತನಾಡಿದರು. ರಾಷ್ಟ್ರೀಯ ಬಸವದಳದ ರತ್ನಮ್ಮ ಜಯಣ್ಣ ಬಸವ ಧರ್ಮ ರಕ್ಷಣೆಗೆ ಮಹಿಳೆಯರ ಪಾತ್ರದ ಬಗ್ಗೆ ಶರಣೆಯರ ಬಗ್ಗೆ ಹೇಳಿದರು.
ಇದೇ ವೇಳೆ ರತ್ನಮ್ಮ ಜಯಣ್ಣ ಅವರಿಗೆ ಕಲ್ಯಾಣ ಕ್ರಾಂತಿ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂಜನಗೂಡು ಮಕ್ಕಳ ಮನೆ ಅನುರಾಗ ಟ್ರಸ್ಟ್ ನ ಅಧ್ಯಕ್ಷರಾದ ಸೋಮಶೇಖರ್ ಹಾಗೂ ಅಕ್ಕ ಮಹಾದೇವಿಮಹಿಳಾ ವಿದ್ಯಾರ್ಥಿ ನಿಲಯದ ಸಂಸ್ಥಾಪಕ ಚೆನ್ನಪ್ಪ ನವರಿಗೆ ಬಸವ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸದಾನಂದ ಮೂರ್ತಿ ಆರ್. ವಿ . ಎಸ್, ದೊಡ್ಡನಹುಂಡಿ ರಾಜಣ್ಣ, ಕೆ. ಎಸ್. ಪ್ರಕಾಶ್ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಮೈಸೂರು,ಬಸವ ಭಾರತ ಸಂಪಾದಕ ಶಿವರುದ್ರಪ್ಪ, ರೂಪ ಶಿವರುದ್ರಪ್ಪ ಉಪಸ್ಥಿತರಿದ್ದರು.
