ಮೈಸೂರು: ಬಾದ್ರಪದ ಶುಕ್ರವಾರ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಶ್ರೀ ಪಾರ್ವತಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಮುಂಜಾನೆ ದೇವಿಗೆ ಪ್ರಧಾನ ಅರ್ಚಕರಾದ ಎಸ್.ಯೋಗಾನಂದ ಅವರು ಅಭಿಷೇಕ,ಪೂಜೆ ನೆರವೇರಿಸಿದರು.
ನಂತರ ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿಗೆ ಕಡು ಗುಲಾಬಿ ಬಣ್ಣದ ರೇಷ್ಮೆ ಸೀರೆ ಉಡಿಸಿ,ಬೆಳ್ಳಿ ಕಿರೀಟ ತೊಡಿಸಿ ಬಗೆ,ಬಗೆಯ ಹೂಗಳಿಂದ ಅಲಂಕಾರಿಸಿ ಮಹಾ ಮಂಗಳಾರತಿ ಮಾಡಿದರು.
ಆನಂತರ ಭಕ್ತರಿಗೆ ತೀರ್ಥ,ಪ್ರಸಾದ ವಿನಿಯೋಗ ಮಾಡಲಾಯಿತು.
