
ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ಪಂಚವಟಿ ಶ್ರೀ ಸೀತಾ ರಾಮ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.
ದೇವಾಲಯದಲ್ಲಿ ವಿಶೇಷವಾಗಿ ವೈಕುಂಠ ಏಕಾದಶಿ ಮಾದರಿಯಲ್ಲಿ ಸ್ವಾಮಿ ವೆಂಕಟೇಶ್ವರನ ಭಾವಚಿತ್ರ ಇಟ್ಟು ಅರ್ಚಕ ಅರುಣ್ ಅವರ ನೇತೃತ್ವದಲ್ಲಿ ದೇವಾಲಯದ ಟ್ರಸ್ಟ್ ನ ಹಿರಿಯರಾದ ಕಮಲಮ್ಮ, ಗಿಣಿಸ್ವಾಮಿ ಹಾಗೂ ಭಕ್ತರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ನಂತರ ವೈಕುಂಠ ಧ್ವಾರದ ಮೂಲಕ ವೆಂಕಟೇಶ್ವರನ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಆನಂತರ ದೇವಾಲಯದ ಪ್ರಾಂಗಣದಲ್ಲಿ ಶ್ರೀ ಸ್ವಾಮಿಯ ಉಯ್ಯಾಲೋತ್ಸವ ನೆರವೇರಿತು.
ತದನಂತರ ಎಲ್ಲಾ ಭಕ್ತರಿಗೆ ಎಳ್ಳು,ಬೆಲ್ಲ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
