ಯಾದಗಿರಿ: ತಿಂಥಣಿ ಸೇತುವೆ ಕೃಷ್ಣಾ ನದಿ ದಂಡೆಯ ಮೇಲಿರುವ ಕನಕ ಗುರು ಪೀಠದ ಪೀಠಾಧಿಪತಿಗಳಾದ ಸಿದ್ದರಾಮಾನಂದಪುರಿ ಮಹಾಸ್ವಾಮಿಜಿ ಅವರು ಲಿಂಗೈಕ್ಯರಾಗಿದ್ದಾರೆ.
ಸ್ವಾಮೀಜಿ ಅವರಿಗೆ 50 ವರ್ಷಗಳಾಗಿತ್ತು.ತೀವ್ರ ಅನಾರೋಗ್ಯದಿಂದ
ಬಳಲುತ್ತಿದ್ದ ಅವರು ಗುರುವಾರ ಮುಂಜಾನೆ ೩.೩೦ಕ್ಕೆ ಆಶ್ರಮದಲ್ಲೆ ಲಿಂಗೈಕ್ಯರಾಗಿದ್ದಾರೆ.
ಹಲವಾರು ವರ್ಷಗಳಿಂದ ಕಲ್ಯಾಣ ಕರ್ನಾಟದಲ್ಲಿ ಹಾಲುಮತ ಸಮಾಜವನ್ನು ಸಧೃಢವಾಗಿ ಸಂಘಟನೆ ಮಾಡುತ್ತಾ ಸಮಾಜಕ್ಕೆ ಆಧ್ಯಾತ್ಮಿಕ ಸಂದೇಶ ನೀಡುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಪೀಠದಲ್ಲಿ ತ್ರಿವಿಧ ದಾಸೋಹಗಳು ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು.
ಈ ಮೂಲಕ ಎಲ್ಲಾ ವರ್ಗದ ಜನರ ಪ್ರಿತಿ-ವಿಶ್ವಾಸ ಗಳಿಸಿ ಸಾಮಾಜಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದರು.
ಶ್ರೀಗಳ ಅಗಲಿಕೆಗೆ ಗುರುಮಿಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮಿಜಿ, ಸೂಗೂರ,ಎನ್ ದ ಭೋಜಲಿಂಗೇಶ್ವರ ಮಠದ ಹಿರಗಪ್ಪ ತಾತನವರು, ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ರಾಯಚೂರು ಸಂಸದ ಜಿ. ಕುಮಾರ ನಾಯಕ, ಮಾಜಿ ಸಂಸದ ಬಿ.ವಿ ನಾಯಕ, ಶಾಸಕರಾದ ರಾಜಾ ವೇಣುಗೋಪಾಲ ನಾಯಕ, ಶರಣಗೌಡ ಕಂದಕೂರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ ಸೇರಿದಂತೆ ಅನೇಕ ಗಣ್ಯರು,ರಾಜಕೀಯ ವ್ಯಕ್ತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
