ಮೈಸೂರು,ಮಾ.1: ಮೈಸೂರಿನ ಕೆ.ಆರ್.ಕ್ಷೇತ್ರದ ಕನಕಗಿರಿ ಸರ್ಕಾರಿ ಶಾಲೆಗೆ ಶಾಸಕ ಟಿ.ಎಸ್.ಶ್ರೀವತ್ಸ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆಗೆ ಬಿಇಒ ಕೃಷ್ಣ ಹಾಗೂ ಮುಖ್ಯೋಪಾಧ್ಯಾಯ ರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆಯ ಒಂದು ಹಾಲ್ ನ ಮೇಲ್ಛಾವಣಿಯ ಗಾರೆ ಉದುರಿಹೋಗಿದ್ದು ಇದನ್ನು ವೀಕ್ಷಿಸಿ,ಅದನ್ನು ಸರಿಪಡಿಸುವ ಕುರಿತು ಚರ್ಚಿಸಿದರು.
ಇದೇ ಬುಧವಾರ ಶಾಲಾ ಅಭಿವೃದ್ಧಿ ಮಂಡಳಿ ಸಭೆ ಕರೆದು ಚರ್ಚಿಸುತ್ತೇನೆ.ಶಾಲೆಯಲ್ಲಿ ಕೊಠಡಿ ಸಂಖ್ಯೆ ಗಳು ಸಾಕಷ್ಟು ಇದಾವೆ,ತಾರಸಿ ಲೀಕ್ ಆಗ್ತಾ ಇದೆ, ಗಾರೆ ಉದುರಿರುವ ತಾರಸಿಯನ್ನು ರಿಪೇರಿ ಮಾಡಬಹುದಾ ಅಥವಾ ಶೀಟ್ ಹಾಕಿಸಬಹುದಾ ಎಂಬ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದರು.
ಶೀಟ್ ಹಾಕಿ ಸರಿಪಡಿಸಿದರೆ ಒಂದು ಒಳ್ಳೆಯ ಊಟದ ಹಾಲ್ ಅಥವಾ ಉತ್ತಮ ಹಾಲ್ ಆಗುತ್ತದೆ ಎಂಬುದರ ಸಾದಕ ಬಾದಕಗಳನ್ನು ಚರ್ಚಿಸಿದ್ದೇನೆ ಎಂದು ಶ್ರೀವತ್ಸ ತಿಳಿಸಿದರು.
ಇದಕ್ಕೆ ಅಂದಾಜು 7 ಲಕ್ಷ ರೂ ವೆಚ್ಚ ತಗುಲಬಹುದು, ಬುಧವಾರದ ಸಭೆಯಲ್ಲಿ ಡಿಡಿಪಿಐ,ಬಿಇಒ ಸೇರಿದಂತೆ ಶಾಲಾ ಅಭಿವೃದ್ದಿ ಮಂಡಳಿಯವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರಾದ ವಾಣಿಶ್ರೀ, ಚೇತನ್ ಪ್ರದೀಪ್ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಪೋಷಕರು ಈ ವೇಳೆ ಹಾಜರಿದ್ದರು.
