ಮೈಸೂರು: ಮೈಸೂರಿನ ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಸರಸ್ವತಿಪುರಂ
ನಲ್ಲಿರುವ ಶ್ರೀ ಕೃಷ್ಣ ಮಿತ್ರ ಮಂಡಳಿಯ
50ನೇ ಸುವರ್ಣ ಸಂಭ್ರಮವನ್ನು ಇದೇ.18 ರಿಂದ 20 ರವರೆಗೆ ಹಮ್ಮಿಕೊಳ್ಳಲಾಗಿದೆ.
ಮೇ 18 ರಂದು ಸಂಜೆ 5.30ಕ್ಕೆ ಸುವರ್ಣ ಸಂಭ್ರಮದ ಉದ್ಘಾಟನೆಯನ್ನು ನೆರವೇರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದರು.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ
ಪಾದಂಗಳವರು ಹಾಗೂ ಉಡುಪಿ ಪೇಜಾವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ ಎಸ್ ಶ್ರೀವತ್ಸರವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರವೀಂದ್ರ ಜೋಶಿ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಂದು ಸಂಜೆ 7 ಗಂಟೆಗೆ ತುಳುನಾಡ ಗಾನಗಂಧರ್ವ ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಮತ್ತು ತಂಡದವರಿಂದ ಭಕ್ತಿ ಸುಧೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಂಗಳವಾರ 19ರಂದು ಸಂಜೆ 5 ಗಂಟೆಗೆ ಶ್ರೀ ಉತ್ತರಾದಿ ಮಠದ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ.
ಅದೇ ದಿನ ಸಂಜೆ 7 ಗಂಟೆಗೆ
ಖ್ಯಾತ ಗಾಯಕಿ ಮತ್ತು ನಟಿ, ವಿದುಷಿ ಎಂ.ಡಿ ಪಲ್ಲವಿ ಮತ್ತು ತಂಡದವರಿಂದ ಭಾವಸುಧೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.
20ರಂದು ಸಂಜೆ 5 ಗಂಟೆಗೆ
ಸುವರ್ಣ ಸಂಭ್ರಮ ಸಮಾರೋಪ ಸಮಾರಂಭ ನೆರವೇರಲಿದ್ದು, ದಿವ್ಯ ಸಾನಿಧ್ಯ ವನ್ನು ಉಡುಪಿಯ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ವಹಿಸುವರು.
ಶಾಸಕರಾದ ಹರೀಶ್ ಗೌಡರು ಉಪಸ್ಥಿತರಿರುವರು.
ನಂತರ ಶ್ರೀ ಕೃಷ್ಣ ಮಿತ್ರ ಮಂಡಳಿಯ ಸಂಸ್ಥಾಪಕ ಸದಸ್ಯರುಗಳಿಗೆ ಮತ್ತು ಮಾಜಿ ಅಧ್ಯಕ್ಷರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ನಂತರ ಕೊಳಲು ಮಾಂತ್ರಿಕ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಬೇಕೆಂದು ಉಪಾಧ್ಯಕ್ಷರಾದ ರವಿಶಾಸ್ತ್ರಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರಾದ ಗೋಪಾಲಕೃಷ್ಣ,
ಉಪಾಧ್ಯಕ್ಷರಾದ ಶ್ರೀವತ್ಸ,ರವಿ ಶಾಸ್ತ್ರಿ,,ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ಪಿ. ಎಸ್ ಶೇಖರ್,ಗೌರವ ಕಾರ್ಯದರ್ಶಿ ಕೆ ವಿ ಶ್ರೀಧರ್,ಹಿರಿಯ ಸದಸ್ಯರಾದ ಜಯರಾಮ್ ಭಟ್ ಉಪಸ್ಥಿತರಿದ್ದರು.
