ಮೈಸೂರು: ಮೈಸೂರು ಜಿಲ್ಲೆ, ಟಿ.ನರಸೀಪುರದಲ್ಲಿ ಗಣೇಶ ಕೂರಿಸುವ ವಿಚಾರಕ್ಕೆ ಇನ್ಸ್ಪೆಕ್ಟರ್ ಧಮ್ಕಿ ಹಾಕಿದ್ದಕ್ಕೆ ಸವಾಲಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡ ಶೋಭಾಯಾತ್ರೆ ವಿಶೇಷವಾಗಿ ನಡೆಯಿತು.
ಹಿಂದೂ ಜಾಗರಣ ವೇದಿಕೆ ಇದೇ ಮೊದಲ ಬಾರಿಗೆ ಹಿಂದೂ ಮಹಾಗಣಪತಿ ಸ್ಥಾಪಿಸಿ ಬೃಹತ್ ಮೆರವಣಿಗೆ ನಡೆಸಿತು.ಎಲ್ಲೆಲ್ಲೂ ಕೇಸರಿ ಧ್ವಜ ಹಾರಾಡಿದವು
ಟಿ.ನರಸೀಪುರ ಲಿಂಕ್ ರಸ್ತೆಯಲ್ಲೇ ಸಾಗಿದ ಬೃಹತ್ ಶೋಭಾಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದ್ದರು.
ಶೋಭಾಯಾತ್ರೆ ಮೆರವಣಿಗೆಯಲ್ಲಿ ಹಿಂದೂ ಮಹಾಗಣಪತಿ ಜೊತೆಗೆ ಪಟ್ಟಣದ ವಿವಿಧೆಡೆ ಕೂರಿಸಿದ್ದ ಗಣಪತಿಗಳನ್ನು ತರಲಾಯಿತು.
ಡೊಳ್ಳು, ನಗಾರಿ ಸೇರಿ ಜನಪದ ಕಲಾತಂಡಗಳ ಕಲಾವೈಭವ,ಕೇಸರಿ ಧ್ವಜಹಾರಾಟ,ಪಡ್ಡೆ ಹುಡುಗರ ಶಿಳ್ಳೆ,ಕೇಕೆ,ಪಟಾಕಿ ಸಿಡಿತ ಜೋರಾಗಿಯೇ ಇತ್ತು.
ಟಿ.ನರಸೀಪುರ ಪಟ್ಟಣದ ಪ್ರಮುಖ ರಾಜಬೀದಿಗಳು, ವೃತ್ತಗಳು ಹಾಗೂ ಸೂಕ್ಷ್ಮ ಬಡಾವಣೆಗಳ ಮೂಲಕ ಶೋಭಾಯಾತ್ರೆ ಸಾಗಿತು.ಸಧ್ಯ ಯಾವುದೇ ಅಹಿತಕರ ಘಟನೆ ನಡೆಯದೆ ಸುಸೂತ್ರವಾಗಿ ಶೋಭಾಯಾತ್ರೆ ನೆರವೇರಿತು.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದರು.
