ಮೈಸೂರು: ಮೈಸೂರಿನ ಅಗ್ರಹಾರ ಕೆ.ಆರ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ನವಗ್ರಹ ದೇವಸ್ಥಾನದಲ್ಲಿ ಇಂದು ಶನೇಶ್ಚರಸ್ವಾಮಿ ಜಯಂತಿ ಮಹೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಇಂದು ಅಮಾವಾಸ್ಯೆ ಕೂಡಾ ಇತ್ತು.ಜತೆಗೆ ಶನಿದೇವರ ಜಯಂತಿಯೂ ಇದ್ದುದರಿಂದ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಶಿವಾರ್ಚಕರಾದ ಯೋಗಾನಂದ ಅವರ ನೇತೃತ್ವದಲ್ಲಿ ಸ್ವಾಮಿಗೆ ಮುಂಜಾನೆ 6 ಗಂಟೆಗೆ ತೈಲಾಭಿಷೇಕ,9 ಗಂಟೆಗೆ ರುದ್ರಾಭಿಷೇಕ,ಗಣಪತಿ ಹೋಮ,ನವಗ್ರಹ ಶಾಂತಿ ಹೋಮ,ಶನೇಶ್ಚರ
ತಿಲಾಹೋಮ ಮತ್ತು ಮೃತ್ಯುಂಜಯ ಹೋಮ ನೆರವೇರಿಸಲಾಯಿತು.
ನಂತರ ತಾಯಿ ಪಾರ್ವತಿ,ಮೃತ್ಯುಂಜಯೇಶ್ವರ ಹಾಗೂ ನವಗ್ರಹಗಳಿಗೆ ಮತ್ತು ಶನೈಶ್ಚರ ಸ್ವಾಮಿಗೆ ವಿವಿಧ ಹೂಗಳಿಂದ ಅಲಂಕರಿಸಲಾಯಿತು.
ತಾಯಿ ಪಾರ್ವತಿ ಸರ್ವಾಲಂಕಾರ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ.ಈ ಅಲಂಕಾರವನ್ನೆಲ್ಲ ಯೋಗಾನಂದ ಅವರ ಪುತ್ರ ಅಭಿನಂದನ್ ನೆರವೇರಿಸಿದರು.
ಪೂರ್ಣಾಹುತಿ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಮಾಡಲಾಯಿತು.
