ಬೆಂಗಳೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಿರಿಯ ಸಹೋದರಿ ಹಾಗೂ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದ ಸಾವಿತಾ ಭಟ್ ಅವರು ವಿಧಿವಶರಾಗಿದ್ದಾರೆ.
ಅವರಿಗೆ 88 ವರ್ಷಗಳಾಗಿತ್ತು,
1950ರ ದಶಕದಲ್ಲಿ ನಡೆದ ಅತ್ಯಂತ ಜನಪ್ರಿಯ ಭೂದಾನ ಚಳವಳಿಯ ಸಂದರ್ಭದಲ್ಲಿ, ವಿಶೇಷವಾಗಿ ಬಿಹಾರದ ಬೋಧಗಯಾ ಪ್ರದೇಶದಲ್ಲಿ ನಡೆದ ಕ್ಷೀಪ್ರಗತಿಯಲ್ಲಿ ಆಚಾರ್ಯ ವಿನೋಬಾ ಭಾವೆ ಅವರೊಂದಿಗೆ ಹೆಜ್ಜೆ ಹಾಕಿದ್ದರು.
ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಿರಿಯ ಸಹೋದರಿಯೂ ಆಗಿದ್ದ ಅವರು, ದೀರ್ಘಕಾಲ ಬೆಂಗಳೂರಿನ ವಲ್ಲಭ ನಿಕೇತನ ವಿನೋಬಾ ಆಶ್ರಮದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸವಿತಾ ಭಟ್ ಅವರು ಪತಿ ವಿ.ಎನ್. ಭಟ್ ಹಾಗೂ ಪುತ್ರ ನವೀನ್ ಭಟ್ ಹಾಗೂ ಹಿತೈಷಿಗಳು, ಬಂಧುಗಳನ್ನು ಅಗಲಿದ್ದಾರೆ.
ಅವರ ಪುತ್ರ ವಿದೇಶದಿಂದ ಬಂದ ನಂತರ ಅಂತ್ಯಕ್ರಿಯೆ ನೆರವೇರಲಿದೆ
ಹೆಚ್ಚಿನ ವಿವರಗಳಿಗೆ ದೂರವಾಣಿ
08040945694
88843 33574 ಸಂಪರ್ಕಿಸಬಹುದು.
