ಮೈಸೂರು: ರೂಪನಗರ ನಿವಾಸಿಗಳ ಕಲ್ಯಾಣ ಸಂಘದ ವತಿಯಿಂದ ರೂಪನಗರದ ವಿದ್ಯಾಲಯ ರಸ್ತೆಯ 16ನೇ ಎ ಅಡ್ಡರಸ್ತೆಯಿಂದ ಮುಂದುವರಿಯುವ ರಸ್ತೆಯ ವಿಭಜಕದಲ್ಲಿ ಅಳವಡಿಸಲಾದ ಸೌರ ಬೀದಿ ದೀಪಗಳ ಯೋಜನೆ ಯಾಗಿದೆ.
ರೂಪನಗರವನ್ನು ಸ್ವಚ್ಛ, ಸುಂದರ ಮತ್ತು ಸುಸ್ಥಿರವಾಗಿಸುವ ಉದ್ದೇಶದಿಂದ ಕೈಗೊಂಡಿರುವ ಈ ಯೋಜನೆ ಎನ್ ಆರ್ ಆರ್ ಡಬ್ಲ್ಯುಎ ನಾಲ್ಕನೇ ಪ್ರಮುಖ ಯೋಜನೆಯಾಗಿದೆ.
ಇದಕ್ಕೂ ಮೊದಲು ನಮ್ಮ ವನ ಉದ್ಯಾನವನ ಅಭಿವೃದ್ಧಿ, ನಮ್ಮ ವನದ ಬಯಲು ರಂಗಮಂದಿರದ ನಿರ್ಮಾಣ ಹಾಗೂ ಕಾವೇರಿ ವನ ಪುನರ್ವ್ಯವಸ್ಥೆ ಯೋಜನೆಗಳನ್ನು ಸಂಘ ಯಶಸ್ವಿಯಾಗಿ ಕೈಗೊಂಡಿದೆ.
ರೂಪನಗರದ ಮುಖ್ಯ ರಸ್ತೆಯಲ್ಲಿ ಬೀದಿ ದೀಪಗಳ ಅಗತ್ಯದ ಕುರಿತು ಮೈಸೂರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಸಾರ್ವಜನಿಕರು ಸಹಭಾಗಿಗಳಾಗಿ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಅವರು ನೀಡಿದ ಸಲಹೆಯ ಹಿನ್ನೆಲೆಯಲ್ಲಿ ಈ ಯೋಜನೆ ರೂಪುಗೊಂಡಿತು.
ಈ ಯೋಜನೆಯ ವಿಶೇಷತೆಯೆಂದರೆ ನಿವಾಸಿಗಳ ಸಕ್ರಿಯ ಸಹಕಾರ. ವಿಭಜಕವನ್ನು ಸ್ವಚ್ಛಗೊಳಿಸಿ, ಕಳೆ ಮತ್ತು ಅನಗತ್ಯ ಗಿಡಗಂಟೆಗಳನ್ನು ತೆರವುಗೊಳಿಸಿ, ಅದನ್ನು ಸುಂದರಗೊಳಿಸಲು ಸಂಘದ ಹಲವಾರು ಸ್ವಯಂಸೇವಕರು ಶ್ರಮದಾನ ಮಾಡಿದರು. ನಿವಾಸಿಗಳ ಈ ಒಗ್ಗಟ್ಟಿನ ಪ್ರಯತ್ನದಿಂದ ರಸ್ತೆ ಹಾಗೂ ವಿಭಜಕಕ್ಕೆ ಹೊಸ ರೂಪ ದೊರಕಿದೆ.
ಯೋಜನೆಯ ವೆಚ್ಚವನ್ನು ಭರಿಸಲು ಜ್ಯೋತಿ ನಾಗರಾಜ್ ಹಾಗೂ ಜೋಸ್ ಜಿನೇಶ್ ಅವರು ಉದಾರವಾಗಿ ನೆರವು ನೀಡಿದ್ದು, ಅವರ ಕೊಡುಗೆ ಯೋಜನೆ ಸಾಕಾರಗೊಳ್ಳಲು ಮಹತ್ವದ ಪಾತ್ರ ವಹಿಸಿದೆ.
ಜ್ಯೋತಿ ನಾಗರಾಜ್ (ಅಮೇರಿಕಾದ ನಿವಾಸಿ) ಅವರು ಅವರ ಹಿರಿಯಣ್ಣ ನೀಲಾವರ ರಾಮಮೋಹನ ಮಧ್ಯಸ್ಥ ರ ಸ್ಮರಣಾರ್ಥ ನಲವತ್ತು ಸೌರ ದೀಪಗಳನ್ನು ಪ್ರಾಯೋಜಿಸಿದ್ದಾರೆ.
ಜ್ಯೂಸ್ ಬಯೋಟೆಕ್ ಪ್ರೈ ಲಿ ನ ನಿರ್ದೇಶಕರಾದ ಜೋಸ್ ಜಿನೇಶ್ ಅವರು ಹದಿನಾರು ಸೌರ ದೀಪಗಳನ್ನು ಪ್ರಾಯೋಜಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಮಮೋಹನ ಮಧ್ಯಸ್ಥರ ಧರ್ಮಪತ್ನಿ ಗೀತಾ ಮೋಹನ್ ಹಾಗೂ ಜೋಸ್ ಜಿನೇಶ್, ಸುನಿಲ್ ಕುಮಾರ್, ನಿರ್ದೇಶಕರು DHBCS , ನರಸಿಂಹ ಮೂರ್ತಿ ಅಧ್ಯಕ್ಷರು NRRWA ಹಾಗೂ ರೂಪವಗರದ ನಿವಾಸಿಗಳು ಉಪಸ್ಥಿತರಿದ್ದರು.
