ಮೈಸೂರು: ಅಯೋಧ್ಯ ಪ್ರಭು ಶ್ರೀ ರಾಮದೇವರ ಪ್ರತಿಷ್ಠಾಪನೆಯಾಗಿ 2ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಅಪೂರ್ವ ಸ್ನೇಹ ಬಳಗದ ವತಿಯಿಂದ
ಶ್ರೀರಾಮಚಂದ್ರ ಪ್ರಭುವಿಗೆ ವಿಶೇಷ ಪೂಜೆ ಸಲ್ಲಿಸಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.
ಮೈಸೂರಿನ ಚಾಮುಂಡಿ ಪುರಂ ವೃತ್ತದ ಬಳಿ ಅಪೂರ್ವ ಹೊಟೇಲ್ ಮುಂಭಾಗ ನಡೆದ ಕಾರ್ಯಕ್ರಮ ದಲ್ಲಿ
ಶ್ರೀರಾಮ ಕಿ ಜೈ ಎಂದು ಕೂಗಿ
ಸಾಮೂಹಿಕ ಶ್ರೀ ರಾಮನ ಜಪ ಮಾಡುವ ಮೂಲಕ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ,ಶತಮಾನಗಳ ಹೋರಾಟ ಮತ್ತು ತ್ಯಾಗದ ಕನಸು ಈಡೇರಿದೆ, ಬಾಲರಾಮನ ಪ್ರತಿಷ್ಠಾಪನೆಯಾಗಿ ಎರಡು ವರ್ಷ ತುಂಬಿದೆ. ಈ ಪವಿತ್ರ ದಿನದಂದು ರಾಜ್ಯದಲ್ಲೆಡೆ ಸಂಭ್ರಮಿಸುತ್ತಿರುವುದು ಸಂತೋಷ ಎಂದು ಹೇಳಿದರು.
ಕರ ಸೇವಕರ ತ್ಯಾಗದ ಹೋರಾಟದ ಫಲ, ಎಲ್ಲರೂ ಸಮಾನತೆ ಪ್ರೀತಿಯಿಂದ ಬಾಳಬೇಕೆಂಬುದು ಶ್ರೀರಾಮನ ಆಶಯ ಎಂದು ತಿಳಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮ್ ಪ್ರಸಾದ್ ಮಾತನಾಡಿ, ಅಯೋಧ್ಯೆಯಲ್ಲಿ ವಿರಾಜಮಾನರಾಗಿರುವ ಬಾಲರಾಮ ದೇಶದ ಸಾಂಸ್ಕೃತಿಕ ಕ್ಷೇತ್ರದ ಪ್ರತೀಕ, ಎಲ್ಲರೂ ಪೂಜಿಸುವ ಎಲ್ಲರೂ ಒಪ್ಪುವ ವ್ಯಕ್ತಿತ್ವ ಶ್ರೀ ರಾಮನದು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವೆಂಗಿಪುರದ ಇಳೈ ಆಳ್ವಾರ್ ಸ್ವಾಮೀಜಿ, ಜಗದೀಶ್,ಕೇಬಲ್ ಮಹೇಶ್, ಅಪೂರ್ವ ಸುರೇಶ್, ನಂದೀಶ್ ನಾಯಕ, ಅರಿವು ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಟಿ ಎಸ್ ಅರುಣ್, ದೂರ ರಾಜಣ್ಣ,ಆನಂದ್, ಶಿವಲಿಂಗಸ್ವಾಮಿ,
ಡಿ. ಕೆ ನಾಗಭೂಷಣ್, ಜತ್ತಿ ಪ್ರಸಾದ್, ಸುಚಿಂದ್ರ, ಚಕ್ರಪಾಣಿ, ಆದರ್ಶ್, ರಂಗನಾಥ್ ಮತ್ತಿತರ ಭಕ್ತರು ಹಾಜರಿದ್ದರು.
