ಮೈಸೂರು: ಮೈಸೂರಿನ ಕಲಾತಂಡ ವತಿಯಿಂದ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ರಕ್ತದಾನಿ ಮಂಜು ಅವರು ಸತತ ಐದು ವರ್ಷಗಳಿಂದ ರಕ್ತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಪಿಜಿಆರ್ ಎಸ್ಎಸ್ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿಯಲ್ಲಿ ತಾಯಂದಿರ ನೋಡಿಕೊಳ್ಳುವ ಪುಣ್ಯದ ಕೆಲಸವನ್ನು ಮಾಡುತ್ತಿರುವುದು, ಹಲವಾರು ಆರೋಗ್ಯ ತಪಾಸಣಾ ಶಿಬಿರ ಜಾಗೃತಿ ಕಾರ್ಯಕ್ರಮಗಳು ಹಾಗೂ ರಂಗಭೂಮಿಯಲ್ಲಿ 15 ವರ್ಷಗಳಿಂದ ಕಿರು ಚಿತ್ರಗಳು ಬೀದಿ ನಾಟಕಗಳನ್ನ ಅಭಿನಯಿಸುವ ಮೂಲಕ ಒಬ್ಬ ಕಲಾವಿದನಾಗಿ ಸೇವೆಯನ್ನ ಸಲ್ಲಿಸಿರುವುದನ್ನು ಗುರುತಿಸಿ, ಮುಂಬೈನಲ್ಲಿ ಮೈಸೂರ್ ಅಸೋಸಿಯೇಷನ್ ಅವರು ರಕ್ತದಾನಿ ಮಂಜು ರವರನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ಇದನ್ನು ಮನಗೊಂಡು ಮೈಸೂರಿನ ಕಲಾತಂಡ ರಕ್ತದಾನಿ ಮಂಜು ಅವರನ್ನು ಗೌರವಿಸಿ ಸನ್ಮಾನಿಸಿ ಸಿಹಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಜಯಚಂದ್ರ, ತಂಡದ ಅಧ್ಯಕ್ಷರಾದ ದನಪಾಲ್ ಗೌಡ, ಕಲಾವಿದರಾದ ದೇವರಾಜಪ್ಪ, ವಂಶಿ,ಜಿವಿಕೆ ರಾವ್, ತಂಡದ ಕಾರ್ಯದರ್ಶಿ ರಮೇಶ್ ಹಾಜರಿದ್ದರು.
