ಮೈಸೂರು: ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯದಲ್ಲಷ್ಟೇ ಅಲ್ಲ ಸ್ಮರಿಸಿದವರ ಮನದಲ್ಲಿಯೂ ನೆಲೆಸುತ್ತಾರೆ, ಪಾಪ ಕರ್ಮಗಳನ್ನು ದೂರ ಮಾಡಿ ಪುಣ್ಯದ ಫಲ ದೊರೆಯುವಂತೆ ಮಾಡುತ್ತಾರೆ
ಎಂದು ಶಾಸಕ ಹರೀಶ್ ಗೌಡ ಬಣ್ಣಿಸಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ 431ನೇ ವರ್ಧಂತಿ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆದರು.
ನಂತರ ಲೋಕಕಲ್ಯಾಣಕ್ಕಾಗಿ ನಡೆದ ಪವಮಾನ ಹೋಮದಲ್ಲಿ ಭಾಗಿಯಾಗಿ ಭಕ್ತಾದಿಗಳಿಗೆ ರಾಯರ ಪ್ರಿಯವಾದ
ತುಳಸಿ ಗಿಡಗಳನ್ನು ವಿತರಿಸಿ ಹರೀಶ್ ಗೌಡ ಮಾತನಾಡಿದರು.
ಲೋಕಿಕ ಜೀವನದಲ್ಲಿ ಒತ್ತಡಗಳಿವೆ, ಅದರ ನಡುವೆಯೂ ಭಗವಂತನ ಸ್ಮರಣೆ ಮರೆಯಬಾರದು,
ಕರುಣಾಮೂರ್ತಿಗಳಾದ ರಾಯರ ಅನುಗ್ರಹಕ್ಕೆ ಎಲ್ಲರೂ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.
ರಾಘವೇಂದ್ರ ಸ್ವಾಮಿ ಭಕ್ತರ ಉದ್ದಾರಕ್ಕಾಗಿ ಕಲಿಯುಗದಲ್ಲಿ ಅವತರಿಸಿದರು, ರಾಯರು ರಚಿಸಿದ ಕೃತಿಗಳನ್ನು ಭಕ್ತರು ಅಧ್ಯಯನ ಮಾಡಬೇಕು ಎಂದು ಹರೀಶ್ ಗೌಡ ಹೇಳಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಕುಲಕರ್ಣಿ, ಗುಂಡಾಚಾರ್, ಚಮಾಚಾರ್,ಶ್ರೀನಿವಾಸ್, ನವೀನ್, ಹರೀಶ್ ಗೌಡ, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ, ಎಸ್.ಎನ್ ರಾಜೇಶ್, ನಂಜುಂಡಿ,
ಲೋಕೇಶ್, ವರುಣ ಮಹಾದೇವ್, ಮಂಗಳ, ಶಾಂತಿ, ನಾಗರಾಜ್, ನಿತಿನ್, ಕಿರಣ್ ಗೌಡ, ಹರ್ಷ, ಮಂಜುನಾಥ್ ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರು.
