ಮೈಸೂರು: ಪ್ರಮಥ ಮ್ಯೂಸಿಕ್ ವೈಬ್ನಿಂದ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಇದೇ
ಸೆ. 21ರಂದು ಸಂಜೆ 5 ಗಂಟೆಗೆ ಮೈಸೂರು, ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತಸಭಾದಲ್ಲಿ ಏರ್ಪಡಿಸಲಾಗಿದೆ.
“ಸ್ವರ ಸಂಭ್ರಮ” ಸ್ವರಗಳೊಂದಿಗೆ ನೆನಪುಗಳು, ನೆನಪುಗಳೊಂದಿಗೆ ಸಂಭ್ರಮ ಎಂಬ ಶೀರ್ಷಿಕೆಯಡಿ ಕರೋಕೆ ಸಂಗೀತ ಕಾರ್ಯಕ್ರಮವು ಪ್ರಮಥ ಮಂಜು ಸಾರಥ್ಯದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಮಥ ಮಂಜು, ರೇವಣ್ಣ, ಸುರೇಶ್, ಪರಮೇಶ್, ಶೇಖಿ ಚಂದ್ರು, ಪಾವನಾ, ತೇಜಾವತಿ, ಗೀತಾ ಶ್ರೀಧರ್, ನಾಗೇಂದ್ರ, ಶ್ರೀಕಂಠರಾವ್, ಶಿವಕುಮಾರ್, ಸಂಪತ್, ರಾಜೇಶ್, ಜಗದೀಶ್, ಕ್ಯಾತನಹಳ್ಳಿ ಪ್ರಕಾಶ್, ಕಾವೇರಿ ಪ್ರಕಾಶ್ ಗಾಯನ ಪ್ರಸ್ತುತಪಡಿಸುವರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸುವರು.
ಅಂದು ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ. ಸುನಿಲ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಕಲಾಪೋಷಕ ಕಾರ್ಪೊರೇಷನ್ ಮಂಜುನಾಥ್ ಅವರುಗಳು ಆಗಮಿಸಲಿದ್ದಾರೆ.
ಉಚಿತ ಪ್ರವೇಶವಿದ್ದು, ಸಂಗೀತಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಮಥ ಮಂಜು ಮನವಿ ಮಾಡಿದ್ದಾರೆ.
