ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜುಂಡೇಶ್ವರನ ರಥೋತ್ಸವ ನೋಡಲು ಬಂದಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ನಂಜುಂಡಸ್ವಾಮಿ(56) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ಬೆಂಗಳೂರಿನ ಮಾಗಡಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ರಥೋತ್ಸವ ನೋಡಲು ಆಗಮಿಸಿದ್ದ ನಂಜುಂಡಸ್ವಾಮಿ, ತೀವ್ರ ಹೃದಯಾಘಾತದಿಂದ ಗಂಭೀರವಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ರಥೋತ್ಸವದ ವೇಳೆ ದುರ್ಘಟನೆ ಸಂಭವಿಸಿ, ಒಬ್ಬ ಭಕ್ತ ಸಾವನ್ನಪ್ಪಿದ್ದಾತೆ ಭಾರಿ ಜನಸಂದಣಿಯಿಂದ ಉಂಟಾದ ಅವ್ಯವಸ್ಥೆಯೇ ಈ ದುರಂತಕ್ಕೆ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದು, ಯಾವುದೇ ಭದ್ರತಾ ವೈಪಲ್ಯ,ಜನಸಂದಣಿಯಿಂದಾಗಿ ಸಾವು ಸಂಭವಿಸಿಲ್ಲ, ಆ ವ್ಯಕ್ತಿಯು ಮೊದಲೇ
ಆನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ.
ಜತೆಗೆ ಯಾರೇ ಆಗಲಿ ತಪ್ಪು ಮಹಿತಿ,ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಪೊಲೀಸ್ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.
