ಕಾಬುಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಯುದ್ಧ ತೀವ್ರಗೊಂಡಿದೆ,ಎರಡೂ ರಾಷ್ಟ್ರಗಳ ಗಡಿಗಳಲ್ಲಿ ಉದ್ವಿಗ್ವ ವಾತಾವರಣ ಇಮ್ಮಡಿಗೊಂಡಿದೆ.
ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ಬಾಂಬ್ ಹಾಕದರೆ ಇದಕ್ಕೆ ಉತ್ತರವಾಗಿ ಆಫ್ಘನ್ ಕೂಡಾ ಭಾರೀ ಬಾಂಬ್ ದಾಳಿ ನಡೆಸುತ್ತಿವೆ.
ಸೋಮವಾರ ರಾತ್ರಿ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದ ವಾಯುದಾಳಿ ನಡೆಸಿದೆ.ಈ ವೇಳೆ
ಕಾಬೂಲ್ನ ಡ್ರಗ್ ಸೆಂಟರ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ್ದು,ಸುಮಾರು 400 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಹಮ್ದಲ್ಲಾ ಫಿತ್ರಾತ್ ಅವರೇ ಈ ಕುರಿತು ಮಾಹಿತಿ ನೀಡಿದ್ದು, ರಾತ್ರಿ 9 ಗಂಟೆಗೆ ನಡೆದ ಈ ದಾಳಿಯು 2,000 ಬೆಡ್ ಇರುವ ಆಸ್ಪತ್ರೆಯ ಪ್ರಮುಖ ವಿಭಾಗಗಳನ್ನು ನಾಶಮಾಡಿದೆ ರಕ್ಷಣಾ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಆಸ್ಪತ್ರೆಗಳನ್ನು ಮತ್ತು ನಾಗರಿಕ ಸ್ಥಳಗಳನ್ನು ಗುರಿ ಮಾಡುತ್ತಿದೆ. ಇದು ಮಾನವತೆಯ ವಿರುದ್ಧದ ಅಪರಾಧ ಎಂದು ಆಫ್ಘನ್ ತೀವ್ರವಾಗಿ ಖಂಡಿಸಿದೆ.
ಆದರೆ ಆಫ್ಘಾನಿಸ್ತಾನದ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶೆಹ್ಬಾಜ್ ಶರೀಫ್ ಅವರೆ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಕಾಬೂಲ್ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರರ್ ಅವರು ಪ್ರತಿಕ್ರಿಯಿಸಿ, ಪಾಕಿಸ್ತಾನದ ಕಾಬುಲ್ ಮತ್ತು ಪೂರ್ವ ಅಫ್ಘಾನಿಸ್ತಾನದ ನಂಗಾರ್ಹರ್ ಪ್ರಾಂತ್ಯದಲ್ಲಿ ಸೈನಿಕ ತಾಣಗಳನ್ನು ಗುರಿಯಾಗಿಸಲಾಗಿತ್ತು ಸೈನಿಕ ಘಟಕಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ತಾಣಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
