ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಗೆ ಬರುವ ಸೈಟುಗಳಲ್ಲಿ ಅಕ್ರಮವಾಗಿ ಕಸ ವಿಲೇವಾರಿ ಮಾಡುತ್ತಿರುವುದನ್ನು ತಡೆಯಬೇಕೆಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ಒತ್ತಾಯಿಸಿವೆ.
ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಗೆ ಬರುವ ಸೈಟುಗಳಲ್ಲಿ ಅಕ್ರಮವಾಗಿ ಕಸ ವಿಲೇವಾರಿ ಮಾಡುತ್ತಿರುವುದು ಕಂಡುಬಂದಿದ್ದು ಇದರಿಂದ ಅಕ್ಕಪಕ್ಕದ ಮನೆಗಳವರು ವಾಸನೆ
ತಡೆಯಲಾಗದೆ ತೊಂದರೆ ಪಡುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಪುರಸಭೆ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬರೆ ವಾಸನೆ ಅಷ್ಟೇ ಅಲ್ಲಾ ಹಾವು ಹಲ್ಲಿಗಳ ಕಾಟ ಜಾಸ್ತಿ ಆಗಿರುವುದರಿಂದ ಪುರಸಭೆಯವರು ಧ್ವನಿ ವರ್ಧಕದ ಮೂಲಕ ಕಸ ಹಾಕದಂತೆ ತಾಕೀತು ಮಾಡಬೇಕೆಂದು ಒತ್ತಾಯಿಸಲಾಯಿತು.
ರಾಜ್ಯ ಹಸಿರು ಸೇನೆ ಕಾರ್ಯದರ್ಶಿ ಕೋಮಲಾಪುರ ಸ್ವಾಮಿಗೌಡರು ಮತ್ತು ಮಹಿಳಾ ಘಟಕದ ಕಾವೇರಮ್ಮ, ತಾಲೂಕು ಅಧ್ಯಕ್ಷರಾದ ಮಹದೇವು, ತಾಲೂಕು ಹಸಿರು ಸೇನೆ ಸದಸ್ಯ ಕೊಣಸೂರು ಶಿವರಾಜ್ ಅವರು ಮನವಿ ಪತ್ರ ಸಲ್ಲಿಸಿದರು.
