ಪಿರಿಯಾಪಟ್ಟಣ: ಕುಂಬಾರ ಜನಾಂಗದವರ ಸದುಪಯೋಗಕ್ಕಾಗಿ ಸಮುದಾಯ ಭವನ ನಿರ್ಮಿಸಲು ಪಿರಿಯಾಪಟ್ಟಣ ತಾಲೂಕಿನಲ್ಲಿ ಜಾಗ ಕೊಡಿಸುವಂತೆ ಒತ್ತಾಯಿಸಿ ತಾಲೂಕಿನ ಕುಂಬಾರ ಜನಾಂಗದವರು ತಹಸೀಲ್ದಾರ್
ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾರ್ಯದರ್ಶಿ ಕೆ ಆರ್ ಸೋಮಶೇಖರ್, ತಾಲೂಕು ಕಾರ್ಯದರ್ಶಿ ಆರ್ ಮಹೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಕೊಣಸೂರು ಶಿವರಾಜ್, ಸಂಚಾಲಕ ಪಿರಿಯಾಪಟ್ಟಣ ಸುರೇಶ್, ಗ್ರಾಮ ಪಂಚಾಯತಿ ಸದಸ್ಯರಾದ ರಂಜಿತಾ ಪ್ರಭು, ಖಜಾಂಚಿಗಳಾದ ಸ್ವಾಮಿ ಶೆಟ್ಟಿ, ರಾಮಶಕ್ತಿ, ಉಪಾಧ್ಯಕ್ಷರಾದ ಕೊಪ್ಪ ರಾಮಚಂದ್ರ, ಕುಮಾರ್ ಹಾಜರಿದ್ದರು.
