ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬು ಸವಾರಿ ಆನೆಗಳೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕುಟುಂಬಸ್ಥರಿಗೆ ಅರಮನೆ ಆವರಣದಲ್ಲಿ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಡಾ: ಯತೀಂದ್ರ ಅವರು ಒಬ್ಬಟ್ಟು ಸೇರಿದಂತೆ ಉಪಹಾರ ಬಡಿಸಿ,ಅವರ ಜತಗೇ ಉಪಹಾರ ಸೇವಿಸಿದರು.
ಉಪಹಾರ ನಂತರ ಮಾವುತರಿಗೆ ಕಿಟ್ ವಿತರಿಸಿ ಮಾತನಾಡಿದ ಸಚಿವರು, ಈ ಬಾರಿಯ ದಸರಾ ಆಚರಣೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಈಗಾಗಲೇ ದಸರಾ ಉನ್ನತ ಮಟ್ಟದ ಸಮಿತಿಗಳ ಸಭೆ ಹಾಗೂ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈಪವರ್ ಕನೆಕ್ಟಿವಿಟಿ ಸಭೆಗಳನ್ನು ನಡೆಸಿ ಸಿದ್ಧತೆಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು
ದಸರಾ ಮಹೋತ್ಸವದ ಪ್ರತಿಯೊಂದು ದಿನವೂ ಒಂದೊಂದು ಕಾರ್ಯಕ್ರಮಕ್ಕೆ ಸಚಿವರುಗಳನ್ನು ಉಸ್ತುವಾರಿಯಾಗಿ ಹಂಚಿಕೆ ಮಾಡಲಾಗಿದೆ.ದಸರಾ ಉಪ ಸಮಿತಿಗಳ ಸಭೆಗಳನ್ನು ನಡೆಸಿ, ದಸರಾ ಆರಂಭದ ದಿನದಿಂದ ವಿಜಯದಶಮಿಯವರೆಗೆ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಉದ್ಘಾಟಕರ ಕುರಿತು ಹರಡಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಸಚಿವರು, ಕನ್ನಡಿಗ ಹಾಗೂ ಸಾಂಸ್ಕೃತಿ ಇಲಾಖೆಯ ಸಚಿವರು ಮೊದಲೇ ಅವರ ಬಳಿ ಚರ್ಚಿಸಿ, ಒಪ್ಪಿಗೆ ಪಡೆದ ನಂತರವೇ ಆಹ್ವಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ದಸರಾ ಹಬ್ಬದ ವೇಳೆ ಪ್ರವಾಸಿಗರಿಗೆ ತೊಂದರೆಯಾಗದಂತೆ ಮೈಸೂರು ನಗರದ ಮುಖ್ಯ ರಸ್ತೆ ಕಾಮಗಾರಿಗಳನ್ನು ಹಬ್ಬ ಮುಗಿಯುವವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚಿಸಲಾಗಿದೆ ಹಾಗೂ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲು ವ್ಯವಸ್ತೆ ಮಾಡಲಾಗುತ್ತದೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಮಾವುತರು ಮತ್ತು ಕಾವಾಡಿಗರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಈ ಬಾರಿಯೂ ಉಸ್ತುವಾರಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಇದೆ ವೇಳೆ ಮಾವುತ ಮಕ್ಕಳಿಗೆ ತೆರೆದಿರುವ ತಾತ್ಕಾಲಿಕ ಶಾಲೆಗೆ ತೆರಳಿ ಮಕ್ಕಳೊಂದಿಗೆ ಯತೀಂದ್ರ ಸಂವಾದ ನಡೆಸಿ ಮಕ್ಕಳ ನೃತ್ಯ ವೀಕ್ಷಿಸಿದರು. ನಂತರ ಯುವ ದಸರಾ,ರೈತ ದಸರಾ,ಯೋಗ ದಸರಾ, ಕಂಬಳ, ಮುದ್ದು ಪ್ರಾಣಿಗಳ ಪ್ರದರ್ಶನಗಳ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಡಿ. ತಿಮ್ಮಯ್ಯ,ಹೆಚ್.ಡಿ. ಕೋಟೆ ಶಾಸಕರು ಹಾಗೂ ಅರಣ್ಯ ವಸತಿ ನಿಗಮದ ಅಧ್ಯಕ್ಷರಾದ ಅನಿಲ್ ಚಿಕ್ಕಮಾದು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರು ಅಯೂಬ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ; ಪುಷ್ಪಾ ಅಮರನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಯ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ. ಜಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,
ಮತ್ತಿತರರು ಉಪಸ್ಥಿತರಿದ್ದರು.
