ಹುಣಸೂರು: ಹುಣಸೂರು ತಾಲೂಕು ಹನಗೋಡು ಹೋಬಳಿ ಬೀರನಹಳ್ಳಿ ಕಾವಲ್ ಒಂದು ಪುಟ್ಟ ಹಳ್ಳಿ.ಸುಮಾರು 70 ವರ್ಷದಿಂದ 60 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಸಣ್ಣ ಮನೆಗಳನ್ನ ಕಟ್ಟಿಕೊಂಡು ವಾಸ ಮಾಡುತ್ತಿವೆ.
ಇಲ್ಲಿ ಸೋಲಿಗರೇ ಹೆಚ್ಚಾಗಿ ವಾಸಮಾಡುತ್ತಾರೆ.ಆರ್ಥಿವಾಗಿ,ಸಾಮಾಜಿಕವಾಗಿ ಜನ ಹಿಂದುಳಿದಿದ್ದಾರೆ.
ಆದರೆ ಆರೇಳು ದಶಕಗಳು ಕಳೆದರೂ ಈ ಹಳ್ಳಿ ಕೊಂಪೆಯಾಗಿಯೇ ಇದೆ. ಸರಿಯಾದ ರಸ್ತೆ ಕೂಡಾ ಇಲ್ಲ.ಶುದ್ದ ಕುಡಿಯುವ ನೀರಿರಲಿ ಮಾಮೂಲು ನೀರಿಗೂ ಇಲ್ಲಿ ಬರ.ಬೋರ್ ವೆಲ್ ಗಳಲ್ಲಿ ನೀರೇ ಇಲ್ಲ.
ಇಲ್ಲಿನ ಜನರಿಗೆ ಶಾಸಕರು, ಪಂಚಾಯಿತಿ ಜನ ಪ್ರತಿನಿಧಿಗಳು ಯಾರು ಎಂಬುದು ಕೂಡಾ ಗೊತ್ತಿಲ್ಲ,ಎಂಎಲ್ಎ ಅವರನ್ನ ನಾವು ನೋಡಿಯೇ ಇಲ್ಲ.ಯಾರೊ ಗೊತ್ತಿಲ್ಲ ಅಂತಾರೆ,ಈಗಲೂ ಹಿಂದಿನ ಶಾಸಕ ಮಂಜುನಾಥ್ ಅವರನ್ನ ನೆನಪು ಮಾಡಿಕೊಳ್ತಾರೆ.
ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ,ಸರಿಯಾದ ರಸ್ತೆ ಇಲ್ಲ.ಮಳೆ ಬಂದಾಗ ಕೆಸರು ಗದ್ದೆಯಾಗಿ ರಾಡಿಯಾಗಿಬಿಡುತ್ತದೆ.ಓಡಾಡಲು ತುಂಬಾ ಕಷ್ಟ ಜಾರಿ ಬೀಳೋದೇನೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಾರೆ.
ಚರಂಡಿ ಎಲ್ಲೊ ಒಂದು ಕಡೆ ನಾಮಕಾವಸ್ತೆಗೆ ಇದೆ.ಆದರೆ ಮುಂದೆ ನೀರು ಹೋಗೋದಿಲ್ಲ.ಮನೆ ಮುಂದೆ ನೀರು ಕಟ್ಟಿ ಕೊಳ್ಳುತ್ತೆ ಒಮ್ಮೊಮ್ಮೆ ಒಳಗೂ ನುಗ್ಗುತ್ತೆ,ಬೇರೆಯವರ ಮನೆ ಮುಂದೆ ಕೊಳಕು ನೀರು ನಿಂತರೆ ದೊಡ್ಡ ಜಗಳಾನೆ ಆಗಿಬಿಡುತ್ತೆ.ಎಷ್ಟೋ ಸರಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಕೂಡಾ ಹತ್ತಿದೆ ಆ ಮಟ್ಟಕ್ಕೆ ಜಗಳವಾಗುತ್ತೆ ಅಂತಾರೆ ಮಹಿಳೆಯರು.
ಹಿಂದುಳಿದ ವರ್ಗದವರೇ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಆಗಲಿ, ಅಧ್ಯಕ್ಷರಾಗಲಿ ಇತರೆ ಜನಪ್ರತಿನಿಧಿಗಳಾಗಲಿ ಬೀರನಹಳ್ಳಿ ಕಾವಲ್ ಕಡೆ ಒಬ್ಬರು ತಿರುಗಿ ನೋಡುವುದಿಲ್ಲ ಇದನ್ನ ನಾವು ಖಂಡಿಸುತ್ತೇವೆ,ಈ ಹಳ್ಳಿಯ ದುಸ್ಥಿತಿ ನೋಡಿ ಬೇಸರವಾಗುತ್ತದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಕೂಡಲೇ ಬೀರನ ಹಳ್ಳಿ ಕಾವಲ್ ಗೆ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಿಕೊಡಬೇಕು ಶುದ್ಧ ಕುಡಿಯುವ ನೀರು ಒದಗಿಸಬೇಕು ಇಲ್ಲದಿದ್ದರೆ ನಮ್ಮ ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷ ಡಾಕ್ಟರ್ ಶಿವಣ್ಣ ಅವರ ನೇತೃತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
